ಕರ್ನಾಟಕ

karnataka

ETV Bharat / bharat

100 ರೂಪಾಯಿಗೆ ಜಗಳ.. ಸಹೋದ್ಯೋಗಿಯನ್ನೇ ಹೊಡೆದು ಕೊಂದ ವ್ಯಕ್ತಿ - ಮಹಾರಾಷ್ಟ್ರ ಕ್ರೈಂ ನ್ಯೂಸ್​

ಮಹಾರಾಷ್ಟ್ರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಕೊಲೆ ಮಾಡಲಾಗಿದ್ದು, ಘಟನೆಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿವೆ.

large stone hit young man
large stone hit young man

By

Published : Mar 5, 2022, 8:54 PM IST

ಮುಂಬೈ: (ಮಹಾರಾಷ್ಟ್ರ): 100 ರೂ. ವಿಚಾರಕ್ಕಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಬೈನ ಗಿರ್​ಗಾಂವ್​​ನಲ್ಲಿ 35 ವರ್ಷದ ವ್ಯಕ್ತಿಯೋರ್ವನ ಮೇಲೆ ಆತನ ಸಹೋದ್ಯೋಗಿ ಸಿಮೆಂಟ್​ ಬ್ಲಾಕ್​​​ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮೂಲತಃ ರಾಜಸ್ಥಾನದ ಅರ್ಜುನ್​ ಯಶ್ವಂತ್ ಸಿಂಗ್​ ತನ್ನ ಸಹೋದ್ಯೋಗಿಯಿಂದ 100 ರೂಪಾಯಿ ಸಾಲ ಪಡೆದುಕೊಂಡಿದ್ದನು. ಇದೇ ವಿಚಾರವಾಗಿ ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಸಿಮೆಂಟ್​ ಬ್ಲಾಕ್​​ನಿಂದ ತಲೆಗೆ ಹೊಡೆದು ಮನೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರ ಬೆನ್ನಲ್ಲೇ ಅರ್ಜುನ್​ ಯಶ್ವಂತ್ ಸಿಂಗ್​​ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ವಿಪಿ ರಸ್ತೆಯ ಪೊಲೀಸರು ಯಶಸ್ವಿಯಾಗಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ:11 ವಿಮಾನಗಳಲ್ಲಿ 2,200 ಭಾರತೀಯರು ಉಕ್ರೇನ್​​ನಿಂದ ನಾಳೆ ತಾಯ್ನಾಡಿಗೆ: ಅಮಿತ್ ಶಾ ಮಾಹಿತಿ

ಸಣ್ಣ ವಿವಾದಕ್ಕೆ ಯುವಕನ ಕೊಲೆ:ಮತ್ತೊಂದು ಪ್ರಕರಣದಲ್ಲಿ ಸಣ್ಣ ವಿವಾದಕ್ಕಾಗಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಥಾಣೆಯ ಕಲ್ಯಾಣ ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಣ್ಣ ಜಗಳಕ್ಕೆ ನಡೀತು ಜಗಳ, ವ್ಯಕ್ತಿಯನ್ನ ಹೊಡೆದು ಕೊಂದ ದುಷ್ಕರ್ಮಿಗಳು

ಉಮೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಕಲ್ಯಾಣ ತಾಲೂಕಿನ ಖಡವಲಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ಅಪರಿಚಿತರು ಇವರನ್ನ ಪ್ರಶ್ನೆ ಮಾಡಿದ್ದು, ವಾಗ್ವಾದ ನಡೆದಿದೆ. ಈ ವೇಳೆ ಉಮೇಶ್ ಎಂಬಾತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ABOUT THE AUTHOR

...view details