ಚಿತ್ತೂರು(ಆಂಧ್ರ ಪ್ರದೇಶ):ಜಿಲ್ಲೆಯ ಪಾಲಮನೇರು ಮಂಡಲದ ಮಂದಪೇಟ ಕೊಡುರುವಿನಲ್ಲಿ ಆನೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಈ ಆನೆಗಳು ತಮ್ಮ ಗ್ರಾಮಗಳ ಬಳಿ ಸಂಚರಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದು, ಇವು ತಮ್ಮ ಬೆಳೆಗಳನ್ನು ನಾಶ ಮಾಡಬಹುದು ಎಂಬ ಭಯದಲ್ಲಿದ್ದಾರೆ ಇಲ್ಲಿನ ರೈತರು.
ಪಾಲಮನೇರು ಮಂಡಲದ ಮಂದಪೇಟ ಕೊಡುರು ಗ್ರಾಮದಲ್ಲಿ ಕಂಡುಬಂದ ಆನೆಗಳ ಹಿಂಡು 38 ಆನೆಗಳ ಬೃಹತ್ ಹಿಂಡೊಂದು ಗ್ರಾಮದ ರಸ್ತೆಯಲ್ಲಿ ದಾಟಿರುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಈ ಆನೆಗಳ ಹಿಂಡನ್ನು ಗ್ರಾಮದಿಂದ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹಿಂದಿರುಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಅಧಿಕಾರಿಗಳನ್ನು ಕೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಆನೆಗಳ ಹಿಂಡನ್ನು ದಟ್ಟವಾದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.
ಓದಿ:ಈ ಪ್ರದೇಶದಲ್ಲಿ ವ್ಯಾಕ್ಸಿನೇಷನ್ ಮಾಡಲು ಮೊಬೈಲ್ ನೆಟ್ವರ್ಕ್ ಕೊರತೆ ಅಡ್ಡಿ!