ಪ್ರೀತಿ ಹಂಚಿದಾಗ ಮನುಷ್ಯರಷ್ಟೇ ಅಲ್ಲ ಮೂಕ ಜೀವಿಗಳೂ ಸ್ಪಂದಿಸುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಲಾಂಗೂರ್ ಕೋತಿಯೊಂದಕ್ಕೆ ದಿನವೂ ಆಹಾರ ನೀಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಆಗಿ ಮೃತ ಪಟ್ಟಿದ್ದು, ಇನ್ನು ದಿನವೂ ಆಹಾರ ನೀಡುತ್ತಿದ್ದ ವ್ಯಕ್ತಿ ಕಾಣಿಸುತ್ತಿಲ್ಲ ಎಂದು ಅವರನ್ನು ಹುಡುಕುತ್ತ ಮನೆ ಬಳಿ ಬಂದ ಲಾಂಗೂರ್, ಅವರು ಮಲಗಿರುವ ಮೃತ ದೇಹವನ್ನು ಕಂಡು ಮೇಲೇಳಿಸಲು ಪ್ರಯತ್ನಿಸಿರುವ ಘಟನೆ ಶ್ರೀಲಂಕಾದ ಬಟ್ಟಿಕೋಲಾದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಆಹಾರ ನೀಡುತ್ತಿದ್ದ ವ್ಯಕ್ತಿ ಕಾಣಿಸದೇ ಇದ್ದ ಹಿನ್ನೆಲೆ ಅವರನ್ನ ಹುಡುಕುತ್ತ ಮನೆಗೆ ಬಂದ ಲಾಂಗೂರ್ ಮೃತ ವ್ಯಕ್ತಿಯ ದೇಹದ ಬಳಿ ಹೋಗಿ ಆಹಾರ ನೀಡುವಂತೆ ಮೇಲೇಳಿಸಲು ಪ್ರಯತ್ನಿಸಿದೆ. ಆ ವ್ಯಕ್ತಿ ಮೇಲೇಳದೇ ಇದ್ದಾಗ ಮೃತ ಪಟ್ಟಿರುವುದಾಗಿ ತಿಳಿದು ಕೊನೆಯದಾಗಿ ಆ ವ್ಯಕ್ತಿಗೆ ಮುತ್ತನ್ನಿಟ್ಟು ಪ್ರೀತಿಯ ವಿದಾಯ ಹೇಳಿ ಅಲ್ಲಿಂದ ಹೊರಟು ಹೋಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.