ಕರ್ನಾಟಕ

karnataka

ETV Bharat / bharat

GMC ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು.. ಗಾಂಧಿನಗರ ಜನತೆಗೆ ಪ್ರಧಾನಿ ಅಭಿನಂದನೆ - ಜಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಎಣಿಕೆ ಕಾರ್ಯ ಮುಗಿದಿದ್ದು, 44 ಸ್ಥಾನಗಳ ಪೈಕಿ ಬಿಜೆಪಿ 41 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಒಟ್ಟು 44 ಸ್ಥಾನಗಳ ಪೈಕಿ ಬಿಜೆಪಿ-41, ಕಾಂಗ್ರೆಸ್-2, ಆಮ್​ ಆದ್ಮಿ ಪಾರ್ಟಿ-1 ಸ್ಥಾನ ಗಳಿಸಿದೆ.

Landslide victory for BJP in GMC election
ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

By

Published : Oct 5, 2021, 6:13 PM IST

ಗಾಂಧಿನಗರ(ಗುಜರಾತ್): ಅಕ್ಟೋಬರ್​ 3 ರಂದು ಗಾಂಧಿನಗರ ಮಹಾನಗರ ಪಾಲಿಕೆ(GMC)ಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಜಿಎಂಸಿ ಚುನಾವಣೆಯಲ್ಲಿ 44 ಸ್ಥಾನಗಳ ಪೈಕಿ ಬಿಜೆಪಿ 41 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಒಟ್ಟು 44 ಸ್ಥಾನಗಳ ಪೈಕಿ ಬಿಜೆಪಿ-41, ಕಾಂಗ್ರೆಸ್-2, ಆಮ್​ ಆದ್ಮಿ ಪಾರ್ಟಿ-1 ಸ್ಥಾನ ಗಳಿಸಿದೆ. ​​ಅಕ್ಟೋಬರ್ 3 ರಂದು ನಡೆದ ಮತದಾನದಲ್ಲಿ ಶೇ. 56.24ಕ್ಕಿಂತ ಹೆಚ್ಚು ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

ಬಿಜೆಪಿಯ ಭರ್ಜರಿ ಗೆಲುವಿಗೆ, ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಬಿಜೆಪಿ ಮತ್ತು ಜನರ ನಡುವಿನ ಬಾಂಧವ್ಯವನ್ನು ಪುನರುಚ್ಚರಿಸುತ್ತವೆ. ಪದೇ ಪದೇ ನಮ್ಮನ್ನು ಆಶೀರ್ವದಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಳಮಟ್ಟದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕಾಗಿ ಕಾರ್ಯಕರ್ತರಿಗೆ ಮತ್ತು ಎಲ್ಲರಿಗೂ ಅಭಿನಂದನೆಗಳು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಲಖೀಂಪುರ್‌ ಖೇರಿ ಹಿಂಸಾಚಾರ ಕೇಸ್‌; ಸಿಬಿಐ ತನಿಖೆಗೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

ABOUT THE AUTHOR

...view details