ಕರ್ನಾಟಕ

karnataka

ETV Bharat / bharat

200 ಮೀಟರ್​ ಉದ್ದ, ಐದು ಅಡಿ ಆಳಕ್ಕೆ ಬಿರುಕು ಬಿಟ್ಟ ಭೂಮಿ - ಭೂಮಿ ಬಿರುಕು

ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಈ ವೇಳೆ ಭಾರಿ ಶಬ್ದ ಕೂಡ ಕೇಳಿ ಬಂದಿದೆ.

landslide-in-jharkhjands-dhanbad
200 ಮೀಟರ್​ ಉದ್ದ, ಐದು ಅಡಿ ಆಳಕ್ಕೆ ಬಿರುಕು ಬಿಟ್ಟ ಭೂಮಿ

By

Published : Nov 19, 2022, 10:08 AM IST

ಧನ್‌ಬಾದ್ (ಜಾರ್ಖಂಡ್‌): ಸುಮಾರು 200 ಮೀಟರ್​ ಉದ್ದ ಮತ್ತು ಐದು ಅಡಿಗಳಷ್ಟು ಆಳಕ್ಕೆ ಭೂಮಿ ಬಿರುಕು ಬಿಟ್ಟಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ. ಭೂಮಿ ಬಿರುಕು ಸಂದರ್ಭದಲ್ಲಿ ಭಾರಿ ಶಬ್ದ ಕೂಡ ಕೇಳಿ ಬಂದಿದೆ ಎನ್ನಲಾಗ್ತಿದೆ.

ಇಲ್ಲಿನ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ (ಇಸಿಎಲ್) ಮ್ಯಾಗ್ಮಾ ಕಾಲೇರಿ ಪ್ರದೇಶದಲ್ಲಿ ಶುಕ್ರವಾರ ಕಾಮಗಾರಿ ವೇಳೆ ಭೂಮಿ ಕುಸಿದಿದೆ. ಆ ಸಮಯದಲ್ಲಿ ಹಲವು ಕೂಲಿ ಕಾರ್ಮಿಕರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಅಲ್ಲದೇ, ಘಟನೆಯ ನಂತರ ಸ್ಥಳದಲ್ಲಿದ್ದ ಕೆಲವರು ಓಡಿ ಹೋದರು. ಭೂಕುಸಿತ ಉಂಟಾದ ಸ್ಥಳದಿಂದ ಕೇವಲ 50-100 ಅಡಿ ದೂರದಲ್ಲಿ ಗುಡಿಸಲು ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಹಿಮಪಾತಕ್ಕೆ ಸಿಲುಕಿ ಕರ್ತವ್ಯ ನಿರತ ಮೂವರು ಯೋಧರ ಸಾವು

ABOUT THE AUTHOR

...view details