ಕರ್ನಾಟಕ

karnataka

ETV Bharat / bharat

ವರುಣಾರ್ಭಟ: ತಿರುಮಲಕ್ಕೆ ತೆರಳುವ ಮಾರ್ಗಮಧ್ಯೆ ಮೂರು ಕಡೆ ಭೂ ಕುಸಿತ - ತಿರುಪತಿ ತಿಮ್ಮಪ್ಪ ದೇವಸ್ಥಾನ,

ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗುವ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಇದೇ ವೇಳೆ, ಸಂಭವಿಸಬೇಕಾಗಿದ್ದ ದೊಡ್ಡ ಅನಾಹುತ ಸುದೈವವಶಾತ್‌ ತಪ್ಪಿದೆ.

Tirumala rains, Tirumala landslide, Tirupati timmappa Devasthanam, Heavy rain in Tirupati, Tirupati flood news, ತಿರುಮಲ ಮಳೆ, ತಿರುಮಲ ಭೂಕುಸಿತ, ತಿರುಪತಿ ತಿಮ್ಮಪ್ಪ ದೇವಸ್ಥಾನ, ತಿರುಪತಿಯಲ್ಲಿ ಭಾರೀ ಮಳೆ, ತಿರುಪತಿ ಪ್ರವಾಹ ಸುದ್ದಿ,
ತಿರುಮಲಕ್ಕೆ ತೆರಳುವ ಮಾರ್ಗ ಮಧ್ಯೆ ಮೂರು ಕಡೆ ಭೂ ಕುಸಿತ

By

Published : Dec 1, 2021, 10:31 AM IST

ತಿರುಪತಿ(ಆಂಧ್ರಪ್ರದೇಶ):ಮಳೆಯಿಂದಾಗಿ ಅಕ್ಷರಶಃ ಆಂಧ್ರಪ್ರದೇಶ ನಲುಗಿದೆ. ಅದರಲ್ಲೂ ತಿರುಪತಿಗೆ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗುತ್ತಿದೆ.

ತಿರುಮಲ ಬೆಟ್ಟಕ್ಕೆ ಹೋಗುವ ಹೆದ್ದಾರಿಯ ಮೂರು ಕಡೆಗಳಲ್ಲಿ ಗುಡ್ಡ ಕುಸಿದಿದೆ. ಪರಿಣಾಮ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನೆಯ ಸಮಯದಲ್ಲಿ ವಾಹನ ದಟ್ಟಣೆ ಇಲ್ಲದ ಕಾರಣ, ಅನಾಹುತ ತಪ್ಪಿದೆ. ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಿರುಮಲದಲ್ಲಿ ಏನಾಗುತ್ತೋ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ. ತಿರುಮಲದಲ್ಲಿ ಎರಡನೇ ಸಂಪರ್ಕ ರಸ್ತೆಯ ಮೇಲೆ ಬೃಹದಾಕಾರದ ಬಂಡೆಗಳು ಅಡ್ಡಲಾಗಿ ಬಿದ್ದಿವೆ. ರಸ್ತೆಗೆ ಅಡ್ಡಲಾಗಿ ಬಂಡೆಗಳು ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯರ ಮೂಲಕ ವಿಷಯ ತಿಳಿದು ನಗರ ಪಾಲಿಕೆ ಸಿಬ್ಬಂದಿ ಬಂಡೆಗಳನ್ನು ತೆರವುಗೊಳಿಸಲು ಮುಂದಾದರು.

ರಸ್ತೆ ದುರಸ್ತಿ ಪೂರ್ಣಗೊಳ್ಳುವವರೆಗೂ ತಿರುಮಲ ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಬೆಟ್ಟ ಇಳಿಯುವ ಮಾರ್ಗದಲ್ಲಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.

ABOUT THE AUTHOR

...view details