ಕರ್ನಾಟಕ

karnataka

ETV Bharat / bharat

ಜಮೀನು ವಿವಾದ ಚಿಕ್ಕಪ್ಪನನ್ನು ಅಮಾನುಷವಾಗಿ ಕೊಂದ ಯುವಕರು: ಇಬ್ಬರ ಬಂಧನ - ಜಮೀನು ವಿವಾದದ ಸಂಬಂಧ ಇಬ್ಬರು ಯುವಕರು

ಆಸ್ತಿಗಾಗಿ ಚಿಕ್ಕಪ್ಪನನ್ನು ಅಮಾನುಷವಾಗಿ ಎಳೆದೊಯ್ದು ಕೊಂದಿರುವ ಘಟನೆ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಜಮೀನು ವಿವಾದ ಚಿಕ್ಕಪ್ಪನನ್ನು ಅಮಾನುಷವಾಗಿ ಕೊಂದ ಯುವಕರು; ಇಬ್ಬರ ಬಂಧನ
land-dispute-youth-brutally-killed-uncle-both-were-arrested

By

Published : Feb 4, 2023, 3:38 PM IST

ರಾಯಪುರ( ಛತ್ತೀಸ್​ಗಢ)​​: ಜಮೀನು ವಿವಾದದ ಸಂಬಂಧ ಇಬ್ಬರು ಯುವಕರು ತಮ್ಮ ಚಿಕ್ಕಪ್ಪನ ಮೇಲೆ ಭೀಕರ ಹಲ್ಲೆ ನಡೆಸಿ, ರಸ್ತೆಯಲ್ಲಿ ಎಳೆದೊಯ್ದು ಅಮಾನುಷವಾಗಿ ಕೊಂದಿರುವ ಘಟನೆ ಛತ್ತೀಸ್​ಗಢ್​ನ ಜಂಗ್ಗಿರ್​ ಚಂಪಾ ಜಿಲ್ಲೆಯ ತನ್ನೊಡ್​ ಗ್ರಾಮದಲ್ಲಿ ನಡೆದಿದೆ. ಯುವಕರು ಸಂತ್ರಸ್ತನನ್ನು ರಸ್ತೆಯಲ್ಲಿ ಸುಮಾರು 60- 70 ಮೀಟರ್​ನವರೆಗೆ ಎಳೆದೊಯ್ದು ಕೊಲೆ ಮಾಡಿದ್ದಾರೆ. ಇಬ್ಬರು ಯುವಕರ ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಖೊಲ್ಬಹರ ಸಾಹು ಸಾವನ್ನಪ್ಪಿದ ವ್ಯಕ್ತಿ. ತನ್ನೊಂಡ್​ ಗ್ರಾಮದ ನಿವಾಸಿಯಾಗಿದ್ದಾರೆ. ಇಬ್ಬರು ಯುವಕರು ಸಂತ್ರಸ್ತರ ಸಂಬಂಧಿಗಳಾಗಿದ್ದು, ಜಮೀನು ವಿವಾದ ಪರಿಹಾರದ ಮಾತುಕತೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಪಟ್ವಾರಿ ಕಚೇರಿಯಿಂದ ಸಾಹುನನ್ನು ಎಳೆದ ತಂದ ಆರೋಪಿಗಳನ್ನು ಅವರನ್ನು ನೆಲಕ್ಕೆ ತಳ್ಳಿದ್ದು, ಕೆಳಗೆ ಬಿದ್ದ ಸಾವುನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆತನ ತಲೆ, ಎದೆ ಮತ್ತು ದೇಹ ಇತರೆ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಇದರ ಪರಿಣಾಮ ಆತ ಸಾವನ್ನಪ್ಪಿದ್ದಾನೆ

ವಿಡಿಯೋದಲ್ಲಿ ಆರೋಪಿಗಳು ಸಂತ್ರಸ್ತನ ದೇಹದ ಮೇಲೆ ಅನೇಕ ಬಾರಿ ಎಗರಿ ಕುಳಿತಿರುವುದು ಕಂಡು ಬಂದಿದೆ. ಈ ಭಯನಕ ಘಟನೆ ಸುತ್ತ ಮುತ್ತಲ ಪ್ರದೇಶದಲ್ಲಿ ಭಾರೀ ಸುದ್ದಿಯಾಗಿದ್ದು. ಆರೋಪಿಗಳು ಸಂತ್ರಸ್ತನ ಅಣ್ಣನ ಮಕ್ಕಳು ಎಂಬುದು ತಿಳಿದು ಬಂದಿದೆ. ಜಮೀನು ಅಳತೆ ವಿಚಾರದಲ್ಲಿ ಆರೋಪಿಗಳು ವಿರೋಧಿಸಿದ್ದರು. ಬಳಿಕ ಈ ವಿಷಯವನ್ನು ಪರಿಹಾರ ಮಾಡಿಕೊಳ್ಳಲು ಅವರು ಪಟ್ವಾರಿ ಕಚೇರಿಗೆ ತೆರಳಿದ್ದರು.

ಘಟನೆ ಕುರಿತು ಮಾತನಾಡಿರುವ ಡಿಎಸ್​ಪಿ ಅನಿಲ್​ ಸೊನಿ, ಸಾವನ್ನಪ್ಪಿದ ಖೊಲ್ಬಹರಾ ಸಾಹು ಜಮೀನಿನ ವಿಚಾರದಲ್ಲಿ ಸಹೋದರನೊಂದಿಗೆ ವಿವಾದ ಹೊಂದಿದ್ದ. ಜಮೀನು ಗಡಿ ಕಾರ್ಯ ಕುರಿತು ಪರಿಶೀಲನೆಗೆ ಪಟ್ವಾರಿಗೆ ಆಗಮಿಸಿದ್ದರು. ಆತನ ಸಹೋದರರ ಮಕ್ಕಳಾದ ಪ್ರಸಾದ್​ ಸಾಹು ಮತ್ತು ಸಂತೋಷ್​ ಸಾಹು ಕೂಡ ಪಟ್ವಾರಿ ಕಚೇರಿಗೆ ಬಂದರು. ಇಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಚಿಕ್ಕಪ್ಪನ ಮೇಲೆ ಕೈ ಮಾಡಿದ್ದಾರೆ. ಅಲ್ಲದೇ ತಳ್ಳಿದ್ದಾರೆ. ಬಳಿಕ ಎಳೆದೊಯ್ದು ಕಲ್ಲಿನಿಂದ ಒಡೆದು ಹಲ್ಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಆಘಾತಕಾರಿ ಘಟನೆ:ತಂತ್ರ ಮಂತ್ರ ವಿದ್ಯೆಯಲ್ಲಿ ಪರಿಣಿತನಾಗಬೇಕು ಎಂದು ವ್ಯಕ್ತಿಯೊಬ್ಬ ತನ್ನ ಗುರುವಿನ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಸುರಿದ ರಕ್ತವನ್ನು ಕುಡಿದಿರುವ ವಿಲಕ್ಷಣಕಾರಿ ಘಟನೆ ಛತ್ತೀಸ್​ಗಢದ ಧಮ್​ಥರಿ ಜಿಲ್ಲೆಯಲ್ಲಿ ನಡೆದಿದೆ. ಪೆರ್ರಿ ಸೊದೂರ್​ ನದಿ ಬಳಿ ಅರೆಬೆತ್ತಲೆ ಮೃತ ದೇಹ ಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ, ಮೃತಪಟ್ಟ ಗುರುವಿನ ಶಿಷ್ಯನಾದ ರೌನಕ್​ ಸಿಂಗ್​​ ಛಬ್ರಾ ಈ ಹತ್ಯೆ ನಡೆಸಿರುವುದು ತಿಳಿದು ಬಂದಿದೆ. ಈತ ತಂತ್ರ ಮಂತ್ರ ವಿದ್ಯೆಯನ್ನು ಬಸಂತ್​ ಸಾಹು ಬಳಿ ಕಲಿಯುತ್ತಿದ್ದ ಎನ್ನಲಾಗಿದೆ. ಒಮ್ಮೆ ತಂತ್ರ ಸಾಧನಕ್ಕಾಗಿ 12 ಗಂಟೆಗೆ ಇಬ್ಬರು ಒಟ್ಟಿಗೆ ಸ್ಮಶಾನಕ್ಕೆ ಆಗಮಿಸಿದ್ದರು. ಈ ವೇಳೆ ಗುರು, ವ್ಯಕ್ತಿ ಕೊಂದು ಆತ ಜೀವ ಹೋಗುವ ಮೊದಲೇ ಆತನ ರಕ್ತ ಕುಡಿದರೆ ತಂತ್ರ ಸಾಧನೆ ಮಾಡಬಹುದು ಎಂದಿದ್ದರು. ಅದರಂತೆ ಈತ ತಂತ್ರ ಸಾಧನೆಗೆ ಆತನ ಗುರುವನ್ನೇ ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ಪತಿ ಬಾಲಕಿಯನ್ನು 2ನೇ ಮದುವೆಯಾಗಿದ್ದಾರೆ': ಪತ್ನಿಯಿಂದ ಪೊಲೀಸರಿಗೆ ದೂರು

ABOUT THE AUTHOR

...view details