ಪ್ರಯಾಗ್ರಾಜ್(ಉತ್ತರಪ್ರದೇಶ) :ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಭೂ ವಿವಾದದ ವಿಚಾರವಾಗಿ ಒಂದೇ ಕುಟುಂಬದ ನಾಲ್ವರ ಕೊಲೆ ಮಾಡಿರುವ ದುಷ್ಟರು, ಮನೆಯಲ್ಲಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಜಮೀನು ವಿವಾದವಾಗಿ ಈ ಘಟನೆ ನಡೆದಿದೆ. ದಲಿತ ಕುಟುಂಬದ ನಾಲ್ವರ ಹತ್ಯೆ ಮಾಡಲಾಗಿದೆ. ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತರ ಕುಟುಂಬ ಭೇಟಿ ಮಾಡಲು ಅನೇಕ ರಾಜಕೀಯ ಮುಖಂಡರು ಆಗಮಿಸುತ್ತಿದ್ದಾರೆ.
ಆಘಾತಕಾರಿ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ. ಮೃತರಲ್ಲಿ 50 ವರ್ಷದ ವ್ಯಕ್ತಿ,ಆತನ 47 ವರ್ಷದ ಪತ್ನಿ, 17 ವರ್ಷದ ಮಗಳು ಹಾಗೂ 10 ವರ್ಷದ ಮಗ ಸೇರಿದ್ದಾರೆ.