ಕರ್ನಾಟಕ

karnataka

By

Published : May 12, 2022, 8:04 PM IST

Updated : May 12, 2022, 8:47 PM IST

ETV Bharat / bharat

ಹಿಂಸಾಚಾರಕ್ಕೆ ತಿರುಗಿದ ಭೂ ವಿವಾದ ಗಲಾಟೆ.. ಮನೆ, ವಾಹನಗಳಿಗೆ ಬೆಂಕಿ, ಮೂವರು ಗಂಭೀರ

ಮಧ್ಯಪ್ರದೇಶದಲ್ಲಿ ಭೂ ವಿವಾದದ ಗಲಾಟೆ ಹಿಂಸಾಚಾರಕ್ಕೆ ತಿರುಗಿದೆ. ಆಕ್ರೋಶಗೊಂಡ ಗುಂಪು ಮನೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಕೋಲಾಹಲ ಸೃಷ್ಟಿಸಿದೆ. ಸ್ಥಳಕ್ಕಾಗಮಿಸಿದ ಪೊಲೀಸ್​ ವಾಹನಗಳ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ದಾಂಧಲೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

land-dispute-burning
ಹಿಂಸಾಚಾರಕ್ಕೆ ತಿರುಗಿದ ಭೂ ವಿವಾದ ಗಲಾಟೆ

ರಾಜಗಢ (ಮಧ್ಯಪ್ರದೇಶ):ಎರಡು ಕುಟುಂಬಗಳ ಮಧ್ಯೆ ಇದ್ದ ಜಮೀನು ವಿವಾದದ ಗಲಾಟೆಯಲ್ಲಿ ತಹಸೀಲ್ದಾರ್​ ಕಚೇರಿ, ಎಸ್​ಡಿಎಂ, ಪೊಲೀಸ್​ ಠಾಣೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ, ಮನೆಯೊಂದಕ್ಕೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವುಂಟು ಮಾಡಿದ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

ನಿನ್ನೆ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಉದ್ರಿಕ್ತ ಗುಂಪೊಂದು ಮನೆಯೊಂದಕ್ಕೂ ಬೆಂಕಿ ಹಚ್ಚಿ, ಇಡೀ ಮನೆಯನ್ನು ಧ್ವಂಸ ಮಾಡಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಆ ಪ್ರದೇಶದಲ್ಲಿ ನಿಷೇಧ ಹೇರಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಭೂ ವಿವಾದ ಗಲಾಟೆ

ಜಮೀನಿಗಾಗಿ ನಡೀತು ಮಾರಾಮಾರಿ:ರಾಜಗಢದ ಎರಡು ಕುಟುಂಬಗಳ ಮಧ್ಯೆ ಬಹಳ ದಿನಗಳಿಂದ ಜಮೀನು ವಿವಾದವಿದೆ. ಈ ಬಗ್ಗೆ ಹಲವು ಬಾರಿ ತಹಸೀಲ್ದಾರ್​, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರೂ ಯಾವುದೇ ಪರಿಹಾರ ಕಂಡಿರಲಿಲ್ಲ. ಕುಟುಂಬಸ್ಥರ ಕೋಪಾಗ್ನಿ ನಿನ್ನೆ ರಾತ್ರಿ ಸ್ಫೋಟಗೊಂಡಿದೆ. ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯೇ ನಡೆದಿದೆ.

ಈ ವೇಳೆ ಬಿಜೆಪಿ ಮುಖಂಡ ಮೋಹನ್ ವರ್ಮಾ ಹಾಗೂ ಅವರ ಸಹೋದರ ಹುಕುಂ ವರ್ಮಾ ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇವರನ್ನು ಜನರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ವೈದ್ಯರು ಭೋಪಾಲ್‌ಗೆ ರವಾನಿಸಿದ್ದಾರೆ.

ಮನೆಗೆ ಬೆಂಕಿ ಹಚ್ಚಿದ ಉದ್ರಿಕ್ತ ಗುಂಪು:ಇನ್ನು ಎರಡು ಕುಟುಂಬಗಳ ಮಧ್ಯೆ ನಡೆದ ಮಾರಾಮಾರಿ ತೀವ್ರ ಸ್ವರೂಪ ಪಡೆದುಕೊಂಡು ಗುಂಪೊಂದರ ಮನೆಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಇಡೀ ಮನೆ ಬೆಂಕಿಗೆ ಧಗಧಗಿಸಿ ಹೊತ್ತಿ ಉರಿದಿದೆ. ಅಲ್ಲದೇ, ತಹಸೀಲ್ದಾರ್​ ಕಚೇರಿ, ಪೊಲೀಸ್​ ಠಾಣೆಯ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡಿದ್ದಾರೆ. ಬಳಿಕ ಈ ಪ್ರದೇಶದಲ್ಲಿ ನಿಷೇಧ ವಿಧಿಸಲಾಗಿದೆ.

ಮಾರಾಮಾರಿ ಬಳಿಕ ಮತ್ತೆ ಗಲಾಟೆ:ಘಟನಾ ಸ್ಥಳಕ್ಕೆ ಪೊಲೀಸರು, ಹಿರಿಯ ಅಧಿಕಾರಿಗಳ ವಾಹನಗಳ ಮೇಲೂ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿತು. ಇದರಿಂದ ಪೊಲೀಸ್ ವಾಹನ ಮತ್ತು ಎಸ್‌ಡಿಎಂ ವಾಹನದ ಗಾಜುಗಳು ಜಖಂಗೊಂಡಿವೆ. ಇನ್ನು ಮಾರಾಮಾರಿ ಬಳಿಕ ಸುಮ್ಮನಾಗಿದ್ದ ಉದ್ರಿಕ್ತರ ಗುಂಪಿನ ಓರ್ವವ್ಯಕ್ತಿ ಇನ್ನೊಂದು ಗುಂಪಿನ ಬಳಿ ಸಂಧಾನಕ್ಕೆ ತೆರಳಿದಾಗ ಆತನ ಮೇಲೆ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆಯಲಾಗಿದೆ.

ಇದರಿಂದ ಆತ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆತನ ಸಹೋದರ ರಕ್ಷಣೆಗೆ ಮುಂದಾದಾಗ ಆತನ ಮೇಲೂ ಹಲ್ಲೆ ನಡೆಸಲಾಗಿದೆ.ಈ ವೇಳೆ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.

ಓದಿ:ತಹಶೀಲ್ದಾರ್​ ಕಚೇರಿ ಮೇಲೆ ಉಗ್ರರ ದಾಳಿ: ಕಾಶ್ಮೀರಿ ಪಂಡಿತ ನೌಕರ ಸಾವು

Last Updated : May 12, 2022, 8:47 PM IST

ABOUT THE AUTHOR

...view details