ಹೈದರಾಬಾದ್:ಯಶಸ್ವಿ ಮೂತ್ರ ಕಸಿ ಚಿಕಿತ್ಸೆಗೆ ಒಳಗಾಗಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ, ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಶನಿವಾರ ಭಾರತಕ್ಕೆ ಮರಳಿದ್ದಾರೆ. ತಂದೆ ಭಾರತಕ್ಕೆ ಬರುತ್ತಿರುವ ಸುದ್ದಿಯನ್ನು ಮಗಳು ರೋಹಿಣಿ ಆಚಾರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ತಂದೆ ಕುರಿತು ಪ್ರೀತಿ ತುಂಬಿದ ಭಾವಾನಾತ್ಮಕ ಸಂದೇಶ ಕೂಡ ಬರೆದು ಗಮನ ಸೆಳೆದಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರಿಗೆ ಅವರ ಮಗಳಾ ರೋಹಿಣಿ ಆಚಾರ್ಯ ಅವರೇ ತಮ್ಮ ಒಂದು ಕಿಡ್ನಿಯನ್ನು ನೀಡಿದ್ದಾರೆ. ತಂದೆ ಇದೀಗ ಹುಷಾರಾಗಿ ಭಾರತಕ್ಕೆ ಮರಳುತ್ತಿರುವ ಕುರಿತು ಟ್ವೀಟ್ ಮಾಡಿರುವ ಅವರು, ತಂದೆ ಬೆಂಬಲಿಗರು ಮತ್ತು ಆತ್ಮೀಯರಿಗೆ ಚೆನ್ನಾಗಿ ಅವರನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ತಂದೆ ಬಗ್ಗೆ ನಿಮಗೆ ಇರುವ ಪ್ರೀತಿಗೆ ಯಾವುದೇ ಮಿತಿ ಇಲ್ಲ. ಆದರೆ, ನನ್ನ ಕಡೆಯಿಂದ ಹೇಳುವುದೆಂದರೆ, ಅವರು ಭಾರತಕ್ಕೆ ಮರಳಿದ ಬಳಿಕ ನೀವು ಅವರನ್ನು ಯಾವಾಗಲೇ ಭೇಟಿ ಮಾಡಿದರು, ಹುಷಾರಾಗಿರಿ. ಅವರ ಭೇಟಿ ವೇಳೆ ಮಾಸ್ಕ್ ಅನ್ನು ಹಾಕಿ ಕೊಂಡು ಅವರ ಆರೋಗ್ಯದ ಕಾಳಜಿವಹಿಸುವಂತೆ ಮನವಿ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ನೀವು ಯಾರನ್ನಾದರೂ ಭೇಟಿ ಮಾಡುವುದಾದರೆ, ಮಾಸ್ಕ್ ಹಾಕಿ ಕೊಳ್ಳಿ ಎಂದು ವೈದ್ಯರು ತಿಳಿಸಿದ್ದು, ತಂದೆ ವೈದ್ಯರ ಸಲಹೆ ಮೇರೆ ಭೇಟಿ ವೇಳೆ ಮಾಸ್ಕ್ ಧರಿಸಲಿದ್ದಾರೆ ಎಂದಿದ್ದಾರೆ. ಯಶಸ್ವಿ ಕಿಡ್ನಿ ಶಸ್ತ್ರ ಚಿಕಿತ್ಸೆ ಬಳಿಕ ಸಂಪೂರ್ಣವಾಗಿ ತಂದೆ ಗುಣಮುಖರಾಗಿದ್ದಾರೆ. ಅವರು ಯಾವುದೇ ರೀತಿಯ ಸೋಂಕಿಗೆ ಒಳಗಾಗದಂತೆ ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದು. ಹೆಚ್ಚಿನ ಜನರನ್ನು ಭೇಟಿಯಾಗದಿರುವಂತೆ ಕೂಡ ಅವರಿಗೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸರಣಿ ಟ್ವೀಟ್ಗಳ ಮೂಲಕ ತಂದೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.