ಕರ್ನಾಟಕ

karnataka

ETV Bharat / bharat

ಲಾಲೂ ಪ್ರಸಾದ್ ಯಾದವ್​ಗೆ ಶ್ವಾಸಕೋಶ ಸೋಂಕು: ಆಸ್ಪತ್ರೆಗೆ ದಾಖಲು

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಶ್ವಾಸಕೋಶದಲ್ಲಿ ಸೋಂಕು ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಿಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ.

By

Published : Jan 22, 2021, 7:46 AM IST

Lalu Prasad develops lung infection, hospitalized
ಲಾಲು ಪ್ರಸಾದ್ ಯಾದವ್

ರಾಂಚಿ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಆರೋಗ್ಯವು ಹದಗೆಟ್ಟಿದ್ದು ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದಾರೆ ಎದಂದು ವೈದ್ಯರು ಮಾಹಿತಿ ನೀಡಿದ್ದಾರೆ.

ರಿಮ್ಸ್ ವೈದ್ಯರಾದ ಡಾ.ಡಿಕೆ. ಜಾ ಮತ್ತು ಡಾ.ಉಮೇಶ್ ಪ್ರಸಾದ್ ಅವರು ಲಾಲೂ ಪ್ರಸಾದ್ ಯಾದವ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಉನ್ನತ ಜೈಲು ಅಧಿಕಾರಿಗಳು ಮತ್ತು ಅಧೀಕ್ಷಕರು ಸಹ ಆರ್​ಜೆಡಿ ಮುಖ್ಯಸ್ಥರನ್ನು ಭೇಟಿ ಮಾಡಲು ರಿಮ್ಸ್ ತಲುಪಿದ್ದಾರೆ.

"ಲಾಲು ಪ್ರಸಾದ್ ಯಾದವ್ (ಆರ್ಜೆಡಿ ಮುಖ್ಯಸ್ಥ) ಸ್ಥಿರವಾಗಿದೆ. ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಒಂದು ರೀತಿಯ ನ್ಯುಮೋನಿಯಾ. ನಾವು ಏಮ್ಸ್ ವಿಭಾಗದ ಶ್ವಾಸಕೋಶದ ಡಿಒಡಿ ಜೊತೆ ಸಮಾಲೋಚಿಸಿದ್ದೇವೆ. ಕೋವಿಡ್​ ವರದಿ ನೆಗೆಟಿವ್ ಬಂದಿದ್ದು, ಆರ್​ಟಿ-ಪಿಸಿಆರ್​ ವರಿಗಿದೆ ಕಾಯುತ್ತಿದ್ದೇವೆ ಎಂದು ರಿಮ್ಸ್ ನಿರ್ದೇಶಕ ಡಾ.ಕಾಮೇಶ್ವರ ಪ್ರಸಾದ್ ಹೇಳಿದ್ದಾರೆ.

ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಮೂತ್ರಪಿಂಡಗಳು ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಹದಗೆಡಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದರು.

ಲಾಲೂ ಪ್ರಸಾದ್​​ ಅವರು ಮಧುಮೇಹ, ರಕ್ತದೊತ್ತಡ, ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 71ರ ಹರೆಯದ ಅವರು, ಮೇವು ಹಗರಣಕ್ಕೆ ಸಂಬಂಧಿಸಿದಂತೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ABOUT THE AUTHOR

...view details