ಕರ್ನಾಟಕ

karnataka

ETV Bharat / bharat

ಮದುವೆ ಅಲ್ವಂತೆ... ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ ನಡೆಸುತ್ತಿರುವೆ ಎಂದ ಲಲಿತ್ ಮೋದಿ - ಸುಶ್ಮಿತಾ ಸೇನ್​ ಲಲಿತ್ ಮೋದಿ

ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಚೇರ್​​ಮನ್​ ಲಲಿತ್ ಮೋದಿ ಬಾಲಿವುಡ್ ನಟಿ ಸುಶ್ಮೀತಾ ಸೇನ್​​ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Lalit Modi announces new beginning with Sushmita Sen
Lalit Modi announces new beginning with Sushmita Sen

By

Published : Jul 14, 2022, 8:54 PM IST

Updated : Jul 14, 2022, 9:19 PM IST

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಅಂಲಕರಿಸಿರುವ ಸುಶ್ಮಿತಾ ಸೇನ್​​ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

'ನನ್ನ ಬೆಟರ್​ ಹಾಫ್ ಪಾಲುದಾರ' ಎಂದು ಸುಶ್ಮಿತಾ ಸೇನ್​ ಜೊತೆಗಿನ ಕೆಲವೊಂದು ಫೋಟೋ ಹಂಚಿಕೊಂಡಿದ್ದಾರೆ. ಐಪಿಎಲ್​ ಮಾಜಿ ಚೇರ್ಮನ್​​ ಆಗಿರುವ ಲಲಿತ್ ಮೋದಿ ಸದ್ಯ ಲಂಡನ್​​ನಲ್ಲಿ ವಾಸವಾಗಿದ್ದಾರೆ. ಇದರ ಬೆನ್ನಲ್ಲೇ ನಟಿ ಸುಶ್ಮಿತಾ ಸೇನ್​ ಜೊತೆಗೆ ಡೇಟಿಂಗ್ ನಡೆಸುತ್ತಿರುವ ವಿಚಾರ ಹೇಳಿಕೊಂಡಿದ್ದಾರೆ.

ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ 2010ರಲ್ಲಿ ಲಲಿತ್ ಮೋದಿ ಭಾರತ ತೊರೆದಿದ್ದಾರೆ. ಸುಶ್ಮಿತಾ ಸೇನ್​​ 1994ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿದ್ದು, 1996ರಲ್ಲಿ ದಸ್ತಕ್ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು.

ಸುಶ್ಮಿತಾ ಸೇನ್​​ ಈ ಹಿಂದೆ ರೋಹ್ಮನ್​ ಶಾಲ್ ಜೊತೆ ಸುತ್ತಾಡುತ್ತಿದ್ದರು. ಆದರೆ, ಇಬ್ಬರ ನಡುವೆ ಬ್ರೇಕ್​​ ಅಪ್​ ಆದ ಬಳಿಕ ಲಲಿತ್ ಮೋದಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆಂದು ಅನೇಕ ಸಲ ಸುದ್ದಿ ಸಹ ಬಿತ್ತರಗೊಂಡಿತ್ತು. ಆದರೆ, ಇದೀಗ ಟ್ವೀಟ್ ಮೂಲಕ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದು, ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸ್ಪಷ್ಟನೆ ಕೊಟ್ಟ ಲಲಿತ್ ಮೋದಿ:ಇವರಿಬ್ಬರ ನಡುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಮದುವೆ ಮಾಡಿಕೊಂಡಿದ್ದಾರೆಂದು ವರದಿಯಾಗಿತ್ತು. ಆದರೆ, ಮತ್ತೊಂದು ಟ್ವೀಟ್ ಮಾಡುವ ಮೂಲಕ ನಾವು ಪರಸ್ಪರ ಡೇಟಿಂಗ್ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ:ಬಳಸಿದ ಸಿರಿಂಜ್​, ಪಾಪಾಸುಕಳ್ಳಿಯಿಂದ 'ಲಿಪ್​​ಸ್ಟಿಕ್​​' ತಯಾರಿಸಿದ ವ್ಯಕ್ತಿ.. 60 ಲಕ್ಷ ಜನರಿಂದ ವಿಡಿಯೋ ವೀಕ್ಷಣೆ!

Last Updated : Jul 14, 2022, 9:19 PM IST

ABOUT THE AUTHOR

...view details