ಕರ್ನಾಟಕ

karnataka

By

Published : May 10, 2022, 3:23 PM IST

ETV Bharat / bharat

ಯುಪಿ ಗೃಹ ಸಚಿವರ ಹೇಳಿಕೆಯಿಂದ ಲಖೀಂಪುರ ಹತ್ಯಾಕಾಂಡ : ಪ್ರಿಯಾಂಕಾ ಗಾಂಧಿ ಆರೋಪ

ಉತ್ತರಪ್ರದೇಶ ಗೃಹ ಸಚಿವ ಅಜಯ್​ ಮಿಶ್ರಾ ಅವರ ಬೇಜವಾಬ್ದಾರಿ ಹೇಳಿಕೆಯಿಂದಲೇ ಲಖೀಂಪುರ ಹತ್ಯಾಕಾಂಡ ನಡೆದಿದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ..

lakhimpur-priyanka
ಪ್ರಿಯಾಂಕಾ ಗಾಂಧಿ

ನವದೆಹಲಿ :ಉತ್ತರಪ್ರದೇಶದ ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಸರ್ಕಾರ ರೈತರ ಪರ ನಿಲ್ಲುವ ಬದಲು ರೈತರಿಗೇ ಬೆದರಿಕೆ ಹಾಕಿದ ಗೃಹ ಸಚಿವ ಅಜಯ್​ ಮಿಶ್ರಾ ಅವರ ಬೆಂಬಲಕ್ಕೆ ನಿಂತಿದೆ. ಇದು ಸರ್ಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌ನ ಲಖನೌ ಪೀಠ ವಿಚಾರಣೆಯ ವೇಳೆ, ಗೃಹ ಸಚಿವ ಅಜಯ್​ ಮಿಶ್ರಾ ರೈತರ ವಿರುದ್ಧ ಹೇಳಿಕೆ ನೀಡದಿದ್ದರೆ, ಈ ಹಿಂಸಾಚಾರ ನಡೆಯುತ್ತಿರಲಿಲ್ಲ. ಜನಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆಯನ್ನು ನೀಡಬಾರದು. ಘನತೆಯಿಂದ ನಡೆದುಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿತ್ತು.

ಕೋರ್ಟ್​ನ ಈ ಹೇಳಿಕೆಯನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಪ್ರಿಯಾಂಕಾ ಗಾಂಧಿ, ಸರ್ಕಾರ ರೈತರ ಪರ ನಿಲ್ಲದೇ ಸಚಿವರ ಹೇಳಿಕೆಯನ್ನೇ ಸಮರ್ಥಿಕೊಳ್ಳುತ್ತಿದೆ. ಇದು ಸರ್ಕಾರದ ರೈತ ವಿರೋಧಿ ಧೋರಣೆ ತೋರಿಸುತ್ತದೆ. ಲಖೀಂಪುರ ಹತ್ಯಾಕಾಂಡದ ಪ್ರಮುಖ ಕಾರಣ ಗೃಹ ಸಚಿವರ ಹೇಳಿಕೆ ಎಂದು ನಮೂದಿಸಿ ಟ್ವೀಟ್​ ಮಾಡಿದ್ದಾರೆ.

ಅನ್ಯಾಯಕ್ಕೊಳಗಾದ ರೈತರ ಪರ ಹೋರಾಟ ಮುಂದುವರಿಯುತ್ತದೆ. ಸಂತ್ರಸ್ತ ರೈತರ ಕುಟುಂಬಗಳು ಮತ್ತು ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ. ಕೋರ್ಟ್​ನಿಂದ ಛೀಮಾರಿಗೆ ಒಳಗಾದ ಬಿಜೆಪಿ ಸಚಿವರು ಸಭ್ಯವಾಗಿ ನಡೆದುಕೊಳ್ಳಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಓದಿ:ಕರ್ನಾಟಕ ಬಿಜೆಪಿ ಪ್ರಭಾವಿ ನಾಯಕನ ಕನ್ಸ್​​​​ಟ್ರಕ್ಷನ್ ಕಂಪನಿ ಗುತ್ತಿಗೆದಾರನಿಗೆ ಬೆದರಿಕೆ: ಆಂಧ್ರ ಸಿಎಂ ಆಪ್ತನ ಬಂಧನ

For All Latest Updates

ABOUT THE AUTHOR

...view details