ಉತ್ತರ ಪ್ರದೇಶ: ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಗುರುವಾರ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 3 ರಂದು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ರೈತರ ಸಾವಿಗೆ ಕಾರಣವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ನಾಲ್ವರು ರೈತರು, ಸ್ಥಳೀಯ ಪತ್ರಕರ್ತರು ಮತ್ತು ಇತರ ಮೂವರು ಸೇರಿದಂತೆ ಎಂಟು ಮಂದಿ ಈ ಘಟನೆಯಲ್ಲಿ ಸಾವನ್ನಪ್ಪಿದರು. ಈ ಪ್ರಕರಣದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಮತ್ತು ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಸ್ಥಳೀಯ ರೈತರು ಪ್ರಮುಖ ಆರೋಪಿಗಳು ಎಂದು ಆರೋಪಿಸಿದ್ದಾರೆ. ಉತ್ತರ - ಮಧ್ಯ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸಚಿವರ ಬೆಂಗಾವಲು ಪಡೆಯ ವಾಹನವು ರೈತರ ಮೇಲೆ ಹರಿದಿತ್ತು.