ಕರ್ನಾಟಕ

karnataka

ETV Bharat / bharat

ಲಖಿಂಪುರ ಹಿಂಸಾಚಾರ: ಮೃತ ಬಿಜೆಪಿ ಕಾರ್ಯಕರ್ತರು, ಕಾರು ಚಾಲಕನಿಗೆ 45 ಲಕ್ಷ ರೂ. ಪರಿಹಾರ - ಲಖಿಂಪುರ ಕೇರಿ ಪ್ರಕರಣ

ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗಿದ್ದು, ಈಗ ಬಿಜೆಪಿ ಕಾರ್ಯಕರ್ತರ ಕುಟುಂಬಗಳಿಗೆ ಹಾಗೂ ಕೇಂದ್ರ ಸಚಿವರ ಕಾರು ಚಾಲಕನ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ.

Lakhimpur incident: Kin of killed BJP men, driver too get Rs 45 lakh
ಲಖಿಂಪುರ ಹಿಂಸಾಚಾರ: ಮೃತಪಟ್ಟ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಕಾರು ಚಾಲಕನಿಗೆ 45 ಲಕ್ಷ ಪರಿಹಾರ ವಿತರಣೆ

By

Published : Oct 9, 2021, 8:09 AM IST

ಲಖನೌ(ಉತ್ತರ ಪ್ರದೇಶ):ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಕಾರು ಚಾಲಕನ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.

ನಾಲ್ಕು ಮಂದಿ ರೈತರು ಸೇರಿದಂತೆ 8 ಮಂದಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದು, ಇದರಲ್ಲಿ ಓರ್ವ ಪತ್ರಕರ್ತ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರೂ ಇದ್ದರು. ಮೃತಪಟ್ಟ ರೈತರು ಮತ್ತು ಪತ್ರಕರ್ತ ಕುಟುಂಬಗಳಿಗೆ ಈ ಮೊದಲೇ ಉತ್ತರ ಪ್ರದೇಶ ಸರ್ಕಾರದಿಂದ ಚೆಕ್​ ವಿತರಣೆ ಮಾಡಲಾಗಿತ್ತು.

ಆರೋಪಿ ಇಂದು ಕೋರ್ಟ್​ಗೆ ಹಾಜರು ಸಾಧ್ಯತೆ

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿದ್ದ ಎಂಬ ಆರೋಪವಿದ್ದು, ಆರೋಪಿಗೆ ತನಿಖೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿತ್ತು. ಆದರೆ ಅವರು ಶುಕ್ರವಾರ ಕೋರ್ಟ್​ಗೆ ಹಾಜರಾಗಿಲ್ಲ.

ಇಂದು ಬೆಳಗ್ಗೆ 11 ಗಂಟೆಗೆ ಕೋರ್ಟ್​ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಇಂದೂ ವಿಚಾರಣೆಗೆ ಹಾಜರಾಗದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಎಫ್​​ಐಆರ್ ದಾಖಲಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಸರ್ಕಾರ ಎಸ್​ಐಟಿ ತನಿಖೆ ಆರಂಭಿಸಿರುವುದು ಮಾತ್ರವಲ್ಲದೇ, ನ್ಯಾಯಾಂಗ ಆಯೋಗವನ್ನು ರಚನೆ ಮಾಡಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:ಕಟ್ಟಡ ಕುಸಿತ: ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆ... ಅವಶೇಷಗಳಡಿ ಸಿಕ್ಕ ಚಿನ್ನಾಭರಣಕ್ಕಾಗಿ ಹುಡುಕಾಟ

ABOUT THE AUTHOR

...view details