ತೇಜ್ಪುರ್ (ಅಸ್ಸೋಂ): ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್ ಮತ್ತು ಮಹಿಳಾ ಭೂ ಸಿಬ್ಬಂದಿಯ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಈಗ ದೇಶದ ಪೂರ್ವ ಭಾಗದ ಅರುಣಾಚಲ ಪ್ರದೇಶ ಮತ್ತು ಅಸ್ಸೋಂನಲ್ಲಿ ಮಹಿಳಾ ಪೈಲಟ್‌ಗಳು ಯುದ್ಧವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ನಿರಾಯಾಸವಾಗಿ ಚಾಲನೆ ಮಾಡುತ್ತಿದ್ದಾರೆ.
ಮುಂಚೂಣಿ ಬೇಸ್ವೊಂದಕ್ಕೆ ಮಾಧ್ಯಮ ತಂಡ ಭೇಟಿ ನೀಡಿದಾಗ, ದೇಶಿ ನಿರ್ಮಿತ ಎಎಲ್ಎಚ್ ಧ್ರುವ್ ಮಾರ್ಕ್ -3 ಹೆಲಿಕಾಪ್ಟರ್ಗಳನ್ನು ಮಹಿಳಾ ಪೈಲಟ್‌ಗಳು ನಿರ್ವಹಿಸುತ್ತಿರುವುದು ಕಂಡು ಬಂದಿತು. ಈಸ್ಟರ್ನ್ ಕಮಾಂಡ್‌ನಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಗಳು, ಮಹಿಳಾ ಪೈಲಟ್‌ಗಳು ಮತ್ತು ಭೂ ಸಿಬ್ಬಂದಿ ಅಧಿಕಾರಿಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ.
ಪಡೆಗಳಿಗೆ ಹಾಗೂ ಸ್ಥಳೀಯ ಜನಸಂಖ್ಯೆಗೆ ಬೆಂಬಲವಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿ ವಲಯದಿಂದ ಪೂರ್ವ ದಿಕ್ಕಿನ ಅರುಣಾಚಲ ಪ್ರದೇಶದ ವಿಜಯನಗರದವರೆಗೆ ಎಲ್ಲ ರೀತಿಯ ಭೂಪ್ರದೇಶಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಅದ್ಬುತ ಮಹಿಳಾ ತಂಡ ಹೊಂದಿದ್ದೇವೆ:ಹಳೆಯ ಸಂಪ್ರದಾಯಗಳನ್ನು ಬಿಟ್ಟು ದೇಶಸೇವೆಗೆ ಕಟಿಬದ್ಧವಾಗಿರುವ ಅದ್ಭುತ ಮಹಿಳೆಯರ ತಂಡವನ್ನು ನಾವು ಹೊಂದಿದ್ದೇವೆ ಎಂದು ಫ್ಲೈಟ್ ಲೆಫ್ಟಿನೆಂಟ್ ತೇಜಸ್ವಿ ಹೇಳಿದರು. ಇವರು Su-30 MKI ಫೈಟರ್ ಜೆಟ್ಗಳ ಫ್ಲೀಟ್ನ ಭಾರತದ ಪ್ರಥಮ ವೆಪನ್ ಸಿಸ್ಟಂ ಆಪರೇಟರ್ನ ಫ್ಲೈಟ್ ಲೆಫ್ಟಿನೆಂಟ್ ಇವರಾಗಿದ್ದಾರೆ.
ಫೈಟರ್ ವಿಮಾನಗಳಲ್ಲಿ ಮಹಿಳೆಯರನ್ನು ನೋಡುವುದು ಇನ್ನುಮುಂದೆ ಅಪರೂಪದ ವಿದ್ಯಮಾನವಾಗಿರುವುದಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರೂ ಒಂದೇ ತೆರನಾಗಿ ತರಬೇತಿ ಪಡೆಯುತ್ತಾರೆ ಹಾಗೂ ಸಮನಾಗಿಯೇ ಕೆಲಸ ಮಾಡುತ್ತಾರೆ. ಆಕಾಶ ಅಥವಾ ಭೂಮಿ ಯಾವುದೇ ಆದರೂ ನಾವೇ ಮೊದಲ ಹೋರಾಟಗಾರರಾಗಿರುತ್ತೇವೆ ಎಂದು ತೇಜಸ್ವಿ ಹೇಳಿದರು.