ಕರ್ನಾಟಕ

karnataka

ETV Bharat / bharat

ಮಗು ಮಡಿಲಲ್ಲಿ ಇಟ್ಕೊಂಡು ಡ್ಯೂಟಿ ನಿರ್ವಹಿಸುವ ಮಹಿಳಾ ಕಾನ್ಸ್​ಟೇಬಲ್​!

ಸಂಸಾರ, ಮಕ್ಕಳ ಜೊತೆಗೆ ಎಲ್ಲವನ್ನೂ ನಿಭಾಯಿಸುವ ಅವ್ವ ಎಲ್ಲ ಕಷ್ಟದ ಸರಮಾಲೆಗಳನ್ನ ಧೈರ್ಯವಾಗಿ ಎದುರಿಸುತ್ತಾಳೆ. ಅದಕ್ಕಾಗಿಯೇ 'ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರು ಇಲ್ಲ' ಎಂಬ ಕೆಜಿಎಫ್​ ಸಿನಿಮಾದಲ್ಲಿನ ಡೈಲಾಗ್​ವೊಂದು ನಿಜ ಜೀವನದಲ್ಲೂ ಕೆಲವೊಮ್ಮೆ ​ಅನ್ವಯವಾಗ್ತದೆ. ಇದಕ್ಕೆ ಸೂಕ್ತ ಉದಾಹರಣೆ ಈ ಫೋಟೋ..

duty with child in her lap in Khunti
duty with child in her lap in Khunti

By

Published : Apr 9, 2022, 9:56 PM IST

ಖೂಂಟಿ(ಜಾರ್ಖಂಡ್​) :ಜಾರ್ಖಂಡ್​ನ ಖೂಂಟಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಡ್ಯೂಟಿ ಮಾಡ್ತಿದ್ದಾರೆ. ಮಹಿಳಾ ಪೊಲೀಸ್ ಪೇದೆ ಮಡಲಲ್ಲಿ ಮಗುವನ್ನಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಮಗುವಿನ ಆರೈಕೆ ಸಹ ಮಾಡ್ತಿದ್ದಾರೆ. ಮಹಿಳಾ ಕಾನ್ಸ್​ಟೇಬಲ್​ ಮುಕ್ತಿ ಹಿಸ್ಸಾ ಎಂಬುವರು ಪೂರ್ತಿ ತಮ್ಮ ಸೊಂಟದ ಭಾಗದಲ್ಲಿ ಮಗುವನ್ನ ಕಟ್ಟಿಕೊಂಡು ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಮುಕ್ತಿ ಹಿಸ್ಸಾ 2017ರ ಬ್ಯಾಚ್​​ನ ಮಹಿಳಾ ಕಾನ್ಸ್​ಟೇಬಲ್​ ಆಗಿದ್ದು, ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳುವುದು, ಮಹಿಳಾ ಅಪರಾಧಿಗಳನ್ನ ನೋಡಿಕೊಳ್ಳುವುದು ಇವರ ಕರ್ತವ್ಯವಾಗಿದೆ.

ಮಗು ಮಡಿಲಲ್ಲಿ ಇಟ್ಕೊಂಡು ಡ್ಯೂಟಿ ನಿರ್ವಹಿಸುವ ಮಹಿಳಾ ಕಾನ್ಸ್​ಟೇಬಲ್​!

ಠಾಣೆಗೆ ಬರುವ ಪ್ರತಿಯೊಬ್ಬರೊಂದಿಗೆ ನಗುಮುಖದಿಂದಲೇ ಮಾತನಾಡುವ ಅವರು. ಶ್ರದ್ಧೆಯಿಂದಲೇ ಕೆಲಸ ಮಾಡ್ತಾರೆ. ಇದರ ಜೊತೆಗೆ ಮಗುವಿನ ಜವಾಬ್ದಾರಿ ಹೊತ್ತುಕೊಂಡಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:ಸ್ಕ್ರ್ಯಾಪ್​ ಮೆಟೀರಿಯಲ್​​ನಿಂದ ₹30 ಸಾವಿರ ವೆಚ್ಚದಲ್ಲಿ ನಿರ್ಮಾಣವಾಯ್ತು ಬೈಕ್​.. ಮಗನ ಹುಟ್ಟುಹಬ್ಬಕ್ಕೆ ​ಅದುವೇ ಗಿಫ್ಟ್​!

ಈ ಹಿಂದೆ ಕೂಡ ಮಧ್ಯಪ್ರದೇಶದ ಧರ್ ಜಿಲ್ಲೆಯ ಉಪ ಪೊಲೀಸ್​ ವರಿಷ್ಠಾಧಿಕಾರಿ ಮೋನಿಕಾ ಸಿಂಗ್​​ ಕರ್ತವ್ಯದಲ್ಲಿದ್ದ ವೇಳೆ ಒಂದೂವರೆ ವರ್ಷದ ಮಗುವನ್ನ ಹೊತ್ತುಕೊಂಡು ಕೆಲಸ ನಿರ್ವಹಿಸಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅದಕ್ಕೆ ಖುದ್ದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ABOUT THE AUTHOR

...view details