ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಖ್ನಲ್ಲಿ ಬೆಳೆಯಲಾಗುವ 'ಸೀ ಬಕ್‌ಥಾರ್ನ್' ಹಣ್ಣಿಗೆ ಭೌಗೋಳಿಕ ಸೂಚ್ಯಂಕ (GI TAG) ಲಭಿಸಿದ್ದು ಈ ಮೂಲಕ ರಾಜ್ಯದ ಕಿರೀಟಕ್ಕೆ ಮತ್ತೊಂದು ಗರಿ ದಕ್ಕಿದಂತಾಗಿದೆ. ಸೀ ಬಕ್‌ಥಾರ್ನ್ ಇನ್ನು ಮುಂದೆ ದೇಶಿಯ ಮತ್ತು ಅಂತರಾಷ್ಟ್ರೀಯವಾಗಿ ಪ್ರತ್ಯೇಕ ಗುರುತನ್ನು ಹೊಂದಿರುತ್ತದೆ.
ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ, ಲಡಾಖ್, ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರಕ್ಕೆ ಉತ್ತೇಜನ ನೀಡಲು ಸೂಚ್ಯಂಕ ರಿಜಿಸ್ಟ್ರಿಯಿಂದ 31 ನೇ ಶ್ರೇಣಿಯಲ್ಲಿ ಸೀ ಬಕ್ಥಾರ್ನ್ಗೆ ಜಿಐ ಟ್ಯಾಗ್ ನೀಡಲಾಗಿದೆ. ಲಡಾಖ್‌ಗೆ ದಕ್ಕಿದ ನಾಲ್ಕನೇ ಜಿಐ ಟ್ಯಾಗ್ ಇದಾಗಿದೆ. ಈ ಹಿಂದೆ, ಲಡಾಖ್ ಪಶ್ಮಿನಾ, ಏಪ್ರಿಕಾಟ್ ಮತ್ತು ಲಡಾಖಿ ಮರದ ಕಲಾಕೃತಿಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಲಾಗಿತ್ತು. ಇದೀಗ ಜಿಐ ಟ್ಯಾಗ್ ಪಡೆದ ಲಡಾಖ್‌ನ ಎರಡನೇ ಹಣ್ಣು ಇದಾಗಿದೆ. ಈ ಹಣ್ಣಿನಿಂದ ಜ್ಯೂಸ್ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಸ್ಥಳೀಯ ಉದ್ಯಮಿಗಳಿಗೆ ಬೆಂಬಲವನ್ನು ನೀಡಲಾಗುತ್ತಿದೆ.
ನವೆಂಬರ್ 24 ರಿಂದ ದೆಹಲಿಯಲ್ಲಿ ಪ್ರಾರಂಭವಾಗುವ ಏಳು ದಿನಗಳ ಲಡಾಖ್ ಫೋಟೋ ಪ್ರದರ್ಶನದಲ್ಲಿ, ಜಿಐ ಟ್ಯಾಗ್ ಪಡೆದ ಲಡಾಖಿ ಉತ್ಪನ್ನಗಳ ಫೋಟೋಗಳೊಂದಿಗೆ, ಲಡಾಕಿ ಸೀ ಬಕ್‌ಥಾರ್ನ್ ಹಣ್ಣಿನ ಫೋಟೋಗಳನ್ನು ಸಹ ಪ್ರದರ್ಶಿಸಲಾಗುತ್ತದೆ. ಈ ಛಾಯಾಚಿತ್ರ ಪ್ರದರ್ಶನದ ಮೂಲಕ, ಜಿಐ ಟ್ಯಾಗ್ ಪಡೆದ ಲಡಾಕಿ ಉತ್ಪನ್ನಗಳ ಪ್ರಚಾರದ ಜತೆಗೆ, ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ.