ಪುಣೆ( ಮಹಾರಾಷ್ಟ್ರ):ಅಡುಗೆಯ್ಲಲಿ ಉಪ್ಪು ಕಮ್ಮಿಯಾದರೆ ಸೇರಿಸಿ ತಿನ್ನುವುದು ಗೊತ್ತಿದೆ. ಆದರೆ ಉಪ್ಪು ಕಮ್ಮಿ ಹಾಕಿದ್ದ ಎಂಬ ಕಾರಣಕ್ಕೆ ಕೊಲೆಯೇ ನಡೆದಿದೆ. ಡಾಬಾದ ಮಾಲೀಕ ಅಡುಗೆಗೆ ಉ್ಪಪುಕಮ್ಮಿ ಹಾಕಿದ್ದಕ್ಕೆ ಬಾಣಸಿಗನನ್ನು ಮನಸೋ ಇಚ್ಚೆ ಥಳಿಸಿ ಕೊಂದಿರುವ ಪ್ರಕರಣ ಒಂದು ತಿಂಗಳು ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದವನನ್ನು ಪ್ರಸೇನಜಿತ್ ಗೊರೈ ಎಂದು ಗುರುತಿಸಲಾಗಿದೆ. ಡಾಬಾ ಮಾಲೀಕರಾದ ಕೈಲಾಸ್ ಮತ್ತು ಓಂಕಾರ್ ಬಂಧಿಸಲಾಗಿದೆ.
ಅಡುಗೆಯಲ್ಲಿ ಉಪ್ಪು ಕಮ್ಮಿ ಹಾಕಿದ್ದ ಎಂಬ ಕಾರಣಕ್ಕೆ ಹಲ್ಲೆ ಮಾಡಿ ಕೊಂದಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿ ಶವವನ್ನು ನದಿ ಎಸೆದಿದ್ದಾಗಿ ಹೇಳಿದ್ದಾರೆ.