ನವದೆಹಲಿ: ದೇಶದಲ್ಲಿ ಈಗಾಗಲೇ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಇದಕ್ಕೆ ಕಾರಣ ಹೆಚ್ಚಿದ ಮಾರುಕಟ್ಟೆ ಮತ್ತು ಕಡಿಮೆ ಪೂರೈಕೆ ಆಗಿದೆ. ಸದ್ಯ ಇದರ ಬೆನ್ನಲ್ಲೇ ಜನರು ಮತ್ತೊಂದು ಅಗತ್ಯ ಆಹಾರ ಸಾಮಗ್ರಿಯ ಬರ ಎದುರಿಸುವಂತೆ ಆಗಲಿದೆ. ಅಚ್ಚರಿ ಆದರೂ ಹೌದು, ಮಳೆ ಕೊರತೆ ಮತ್ತು ಕಡಿಮೆ ಬಿತ್ತನೆಯಿಂದಾಗಿ ಅಕ್ಕಿ ಇಳುವರಿ ಕಡಿಮೆಯಾಗಿದೆ. ಇದರ ಕೊರತೆ ಎದುರಾಗುವ ದಿನ ಸನ್ನಿಹಿತವಾಗಿದೆ ಎಂದು ಮೋತಿಲಾಲ್ ಒಸ್ವಾಲ್ ಫೈನಾನ್ಸ್ ಸರ್ವೀಸ್ ವರದಿಯಲ್ಲಿ ತಿಳಿಸಿದೆ.
ಜಾಗತಿಕವಾಗಿ ಅಕ್ಕಿ ಬೆಲೆ ದುಬಾರಿಯಾಲಿದ್ದು, ಇದರಿಂದ ಸ್ಥಳೀಯವಾಗಿಯೂ ಅಕ್ಕಿ ದರ ಏರಿಕೆ ಕಾಣಲಿದೆ. ಒಟ್ಟಾರೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಬ್ಯಾಸ್ಕೆಟ್ 4.4 ರಷ್ಟಿದೆ.
ಮಾನ್ಸೂನ್ ಮಳೆ ಕೊರತೆಯಿಂದಾಗಿ ಪ್ರಮುಖವಾಗಿ ಅಕ್ಕಿ ಉತ್ಪಾದಿಸುವ ರಾಜ್ಯದಲ್ಲಿ ಶೇ 49ರಷ್ಟು ಉತ್ಪಾದನೆ ಹಂಚಿಕೆ ಕುಂಠಿತವಾಗಿದೆ. ಅವುಗಳೆಂದರೆ ಪಶ್ಚಿಮ ಬಂಗಾಳ ಶೇ 11ಕ್ಕಿಂತ ಕಡಿಮೆ ಉತ್ಪಾದನೆ, ಉತ್ತರ ಪ್ರದೇಶ ಶೇ 2ರಷ್ಟು, ಆಂಧ್ರ ಪ್ರದೇಶ ಶೇ 22ರಷ್ಟು, ಒಡಿಶಾ ಶೇ 25ರಷ್ಟು, ತೆಲಂಗಾಣ ಶೇ 35ರಷ್ಟು, ಛತ್ತೀಸ್ಗಢ ಶೇ 12ರಷ್ಟು, ಬಿಹಾರ ಶೇ 29ರಷ್ಟು ಮತ್ತು ಅಸ್ಸೋಂನಲ್ಲಿ ಶೇ 2ರಷ್ಟು ಬಿತ್ತನೆ ಕಡಿಮೆಯಾಗಿದ್ದು, ಇದು ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ.
ಆದಾಗ್ಯೂ ಹೆಚ್ಚಿನ ನೀರಾವರಿ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇದು ಕಡಿಮೆ ಪರಿಣಾಮ ಬೀರಿದೆ. ವಾಯುವ್ಯ ಪ್ರದೇಶದ ಹೊರತಾಗಿ, ಉಳಿದೆಡೆ ಸಾಮಾನ್ಯಕ್ಕಿಂತ ಶೇ 59ರಷ್ಟು ಮತ್ತು ಮಧ್ಯ ಭಾರತದಲ್ಲಿ ಶೇ 4ಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ವರದಿ ತಿಳಿಸಿದೆ.
ಮಾನ್ಸೂನ್ ಮಳೆ ಕೊರತೆ: ಜುಲೈ 9ಕ್ಕೆ ಹೋಲಿಸಿದರೆ ಸಂಚಿತ ಮಳೆ ಘಟಕವೂ ಸಾಮಾನ್ಯಕ್ಕಿಂತ 2 ಶೇಕಡಾ ಮತ್ತು ಕಳೆದ ವರ್ಷ ಸಾಮಾನ್ಯಕ್ಕಿಂತ 3 ಶೇಕಡಾ ಹೆಚ್ಚಾಗಿದೆ. ಆದಾಗ್ಯೂ ಮಳೆ ವಿತರಣೆ ಅಸಮಾನತೆಯಿಂದ ಕೂಡಿದೆ. ದಕ್ಷಿಣದಲ್ಲಿ ಮಳೆಯ ಕೊರತೆಯು ಕಳೆದ ವಾರ ಸಾಮಾನ್ಯಕ್ಕಿಂತ 45 ಪ್ರತಿಶತಕ್ಕಿಂತ ಕಡಿಮೆಯಾಗಿದ್ದು, ಈಗ ಸಾಮಾನ್ಯಕ್ಕಿಂತ 23 ಪ್ರತಿಶತಕ್ಕೆ ಕಡಿಮೆಯಾಗಿದೆ. ಪೂರ್ವ ಮತ್ತು ಈಶಾನ್ಯ ಪ್ರದೇಶಗಳು ಶೇ.17 ರಷ್ಟು ಕೊರತೆಯನ್ನು ಕಂಡಿವೆ ಎಂದು ವರದಿ ತಿಳಿಸಿದೆ.