ಕರ್ನಾಟಕ

karnataka

ಈ ಪ್ರದೇಶದಲ್ಲಿ ವ್ಯಾಕ್ಸಿನೇಷನ್​​ ಮಾಡಲು ಮೊಬೈಲ್ ನೆಟ್​​​ವರ್ಕ್​​ ಕೊರತೆ ಅಡ್ಡಿ!

By

Published : Jun 2, 2021, 6:49 PM IST

ರಾಜಸ್ಥಾನದ ದೌಸಾ ಜಿಲ್ಲೆಯ ಸುಮಾರು 18 ಹಳ್ಳಿಗಳಿಗೆ ಮೊಬೈಲ್ ನೆಟ್​​​ವರ್ಕ್ ಇಲ್ಲದ ಕಾರಣ ಕೋವಿನ್ ಮತ್ತು ಆರೋಗ್ಯ ಸೇತು ಆ್ಯಪ್​ಗಳಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

mobile
mobile

ದೌಸಾ/ ರಾಜಸ್ಥಾನ: ರಾಜಸ್ಥಾನದ ದೌಸಾ ಜಿಲ್ಲೆಯ ಸುಮಾರು 18 ಹಳ್ಳಿಗಳಿಗೆ ಮೊಬೈಲ್ ನೆಟ್​​​ವರ್ಕ್ ಇಲ್ಲ, ಹೀಗಾಗಿ ಇಲ್ಲಿನ ಜನ ಕೋವಿನ್ ಮತ್ತು ಆರೋಗ್ಯ ಸೇತು ಆ್ಯಪ್​ಗಳಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಾಜಸ್ಥಾನದ ಈ ಗುಡ್ಡಗಾಡು ಪ್ರದೇಶವು ಭಾರತ ಸ್ವಾತಂತ್ರ್ಯ ಪಡೆದು 73 ವರ್ಷಗಳು ಕಳೆದರೂ ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ. ಇಲ್ಲಿ, ಜನರು ಇನ್ನೂ ಹಿಂದಿನ ರೀತಿಯಲ್ಲಿಯೇ ಸಾಂಪ್ರದಾಯಿಕವಾಗಿ ವಾಸಿಸುತ್ತಿದ್ದಾರೆ. ಆಧುನಿಕ ಸೌಲಭ್ಯಗಳು ಲಭ್ಯವಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ.

ಮೊಬೈಲ್ ಆ್ಯಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಲಸಿಕೆಗಳ ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಆದರೆ, ನೆಟ್​​ವರ್ಕ್​ ಸಮಸ್ಯೆಯಿಂದಾಗಿ ಈ ಪ್ರದೇಶದಲ್ಲಿ ಸಂಪೂರ್ಣ ವ್ಯಾಕ್ಸಿನೇಷನ್ ಸಾಧ್ಯವಾಗಿಲ್ಲ.

ರಾಜಸ್ಥಾನದ ಈ ಅಭಿವೃದ್ಧಿಯಾಗದ ಪ್ರದೇಶದಲ್ಲಿ ಕೇಂದ್ರ ಸರ್ಕಾರದ "ಡಿಜಿಟಲ್ ಇಂಡಿಯಾ" ಅಭಿಯಾನ ವಿಫಲವಾಗಿದೆ. ಮೊಬೈಲ್ ನೆಟ್‌ವರ್ಕ್‌ಗಳ ಕೊರತೆಯಿಂದಾಗಿ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ.

ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಮತಾ ಭೂಪೇಶ್ ಮತ್ತು ಕೈಗಾರಿಕಾ ಅಭಿವೃದ್ಧಿ ಮತ್ತು ರಾಜ್ಯ ಉದ್ಯಮಗಳ ಸಚಿವ ಪಾರ್ಸಾಡಿ ಲಾಲ್ ಮೀನಾ ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಜಸ್ಕೌರ್ ಮೀನಾ ಈ ಪ್ರದೇಶಕ್ಕೆ ಸಂಸತ್ ಸದಸ್ಯರಾಗಿದ್ದಾರೆ. ಆದರೆ, ಜನಪ್ರತಿನಿಧಿಗಳು ಚುನಾವಣಾ ಭರವಸೆಗಳು ಈಡೇರಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ABOUT THE AUTHOR

...view details