ಹೈದರಾಬಾದ್: ಕೊರೊನಾ ಮಹಾಮಾರಿಯ ಬಿಕ್ಕಟ್ಟಿನ ಮಧ್ಯೆ ದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳ ಕೊರತೆ ಎಷ್ಟು ಭೀಕರವಾಗಿದೆ ಎಂಬುದು ಎಳೆಎಳೆಯಾಗಿ ಬಹಿರಂಗವಾಗುತ್ತಿದೆ. ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕದ ಕೊರತೆ ಮತ್ತು ಔಷಧಗಳ ಕೊರತೆ ಹೇಳತೀರದಂತಾಗಿದೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳ ಹೀನಾಯ ಸ್ಥಿತಿಗೆ ಇದು ಸಾಕ್ಷಿಯಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯರ ಸಂಖ್ಯೆ ಎಷ್ಟಿದೆ, ಎಷ್ಟು ಜನಸಂಖ್ಯೆಗೆ ಎಷ್ಟು ವೈದ್ಯರಿದ್ದಾರೆ, ಹಾಸಿಗೆಗಳಿವೆ, ಎಷ್ಟು ಆರೋಗ್ಯ ಸಂಸ್ಥೆಗಳಿವೆ ಎಂಬುದರ ಮೇಲೆ ದೇಶವೊಂದರ ಆರೋಗ್ಯ ಮೂಲಸೌಕರ್ಯಗಳನ್ನು ಅಳೆಯಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 1000 ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು. ಆದರೆ, ದೇಶದ ಯಾವುದೇ ರಾಜ್ಯದಲ್ಲಿ ಈ ಮಾನದಂಡಗಳಿಗೆ ತಕ್ಕಂತೆ ವೈದ್ಯಕೀಯ ವ್ಯವಸ್ಥೆ ಇಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯರು, ಹಾಸಿಗೆ ಕೊರತೆ ಸೇರಿದಂತೆ ಇನ್ನಿತರ ವೈದ್ಯಕೀಯ ಸೌಲಭ್ಯಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯೋಣ.
ರಾಜಸ್ಥಾನ
ರಾಜಸ್ಥಾನದ ಜನಸಂಖ್ಯೆ ಸುಮಾರು 7 ಕೋಟಿ ಇದ್ದು ರಾಜ್ಯದಲ್ಲಿ ಸುಮಾರು 50 ಸಾವಿರ ವೈದ್ಯರಿದ್ದಾರೆ. ಇದರ ಪ್ರಕಾರ ರಾಜ್ಯದಲ್ಲಿ ಸುಮಾರು 1400 ಜನರಿಗೆ ಓರ್ವ ವೈದ್ಯರಿದ್ದಾರೆ. ರಾಜ್ಯದಲ್ಲಿ 16 ಸರ್ಕಾರಿ ಮತ್ತು 8 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಸುಮಾರು 1.5 ಲಕ್ಷ ಹಾಸಿಗೆಗಳಿವೆ. ಅಂದರೆ, 466 ಜನರಿಗೆ ಒಂದು ಹಾಸಿಗೆ ಲಭ್ಯವಿದೆ. ಏಮ್ಸ್ ಆಸ್ಪತ್ರೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬಿಹಾರ
ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ಬಿಹಾರ ಅತ್ಯಂತ ಕೆಟ್ಟ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಓರ್ವ ವೈದ್ಯರಿದ್ದಾರೆ ಎಂಬ ಅಂಶದಿಂದ ಇದನ್ನು ಅರಿಯಬಹುದು. ಬಿಹಾರದ ಜನಸಂಖ್ಯೆ 13 ಕೋಟಿಗಿಂತ ಹೆಚ್ಚಾಗಿದ್ದರೂ ರಾಜ್ಯದ ಆರೋಗ್ಯ ಬಜೆಟ್ 13,264 ಕೋಟಿ ಮಾತ್ರವಾಗಿದೆ. ಪಾಟ್ನಾದ ಏಮ್ಸ್ ಆಸ್ಪತ್ರೆ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಎಂದು ಪರಿಗಣಿಸಲಾಗಿದೆ.
ಮಧ್ಯಪ್ರದೇಶ
ಮಧ್ಯಪ್ರದೇಶದ ಆರೋಗ್ಯ ಬಜೆಟ್ 15 ಸಾವಿರ ಕೋಟಿಗಿಂತ ಹೆಚ್ಚು. ಸುಮಾರು 7.5 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಪ್ರತಿ 2000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಏಮ್ಸ್ ಹೊರತುಪಡಿಸಿ, ಭೋಪಾಲ್‌ನಲ್ಲಿ 20 ವೈದ್ಯಕೀಯ ಕಾಲೇಜುಗಳು, 1199 ಪಿಎಚ್‌ಸಿ ಮತ್ತು 334 ಸಿಎಚ್‌ಸಿಗಳಿವೆ.
ಜಾರ್ಖಂಡ್
ಜಾರ್ಖಂಡ್ ಸುಮಾರು 4 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 18,518 ಜನರಿಗೆ ಓರ್ವ ವೈದ್ಯರನ್ನು ಮತ್ತು ಸುಮಾರು 2500 ಜನರಿಗೆ ಒಂದು ಹಾಸಿಗೆಯನ್ನು ಹೊಂದಿದೆ. ಈ ಮಾಹಿತಿಯು ರಾಜ್ಯದ ಆರೋಗ್ಯ ಸೌಲಭ್ಯಗಳ ಕೊರತೆಯನ್ನು ಬಿಚ್ಚಿಡುತ್ತದೆ. ಜಾರ್ಖಂಡ್‌ನಲ್ಲಿ 24 ಜಿಲ್ಲಾ ಆಸ್ಪತ್ರೆಗಳು, 3 ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಇವೆ. ದೇವಘರ್ನಲ್ಲಿ ಏಮ್ಸ್ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿ ಈಗಾಗಲೇ ಓಪಿಡಿ ಸೇವೆಗಳನ್ನು ಆರಂಭಿಸಲಾಗಿದೆ.
ಛತ್ತೀಸಗಢ
ಛತ್ತೀಸಗಢದಲ್ಲಿ ಸುಮಾರು 11 ಸಾವಿರ ವೈದ್ಯರಿದ್ದು, ಎರಡೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರ ಪ್ರಕಾರ ಇಲ್ಲಿ ಪ್ರತಿ 2500 ಜನರಿಗೆ ಒಬ್ಬ ವೈದ್ಯರಿದ್ದಾರೆ. ಇಲ್ಲಿ 369 ಸರ್ಕಾರಿ ಮತ್ತು 62 ಖಾಸಗಿ ಆಸ್ಪತ್ರೆಗಳಿವೆ. ರಾಜ್ಯದಲ್ಲಿ ಹಾಸಿಗೆಗಳ ಸಂಖ್ಯೆ 31,649 ಆಗಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಸುಮಾರು 800 ಜನರಿಗೆ ಒಂದು ಹಾಸಿಗೆ ಲಭ್ಯವಿದೆ.
ಕರ್ನಾಟಕ