ಕರ್ನಾಟಕ

karnataka

ಮೋದಿ ಸಂಸದೀಯ ಕ್ಷೇತ್ರದಲ್ಲಿ ಆಮ್ಲಜನಕದ ಕೊರತೆ.. ಶವಸಂಸ್ಕಾರಕ್ಕಾಗಿ ಸರತಿ ಸಾಲು!

By

Published : Apr 29, 2021, 4:31 PM IST

ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಕೊರೊನಾ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರುಗಳು ಕೇಳಿ ಬರುತ್ತಿವೆ.

hospital
hospital

ವಾರಾಣಸಿ (ಉತ್ತರ ಪ್ರದೇಶ):ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅದಿತ್ಯನಾಥ್ ಇಬ್ಬರೂ ಹೇಳಿದ್ದಾರೆ. ಹಾಸಿಗೆಗಳು, ಆಮ್ಲಜನಕ ಪೂರೈಕೆ, ವೆಂಟಿಲೇಟರ್‌ಗಳ ಲಭ್ಯತೆ ಮುಂತಾದ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಲು ಯುಪಿ ಸಿಎಂ ಹಲವಾರು ವರ್ಚುಯಲ್ ಸಭೆಗಳನ್ನು ನಡೆಸಿದ್ದಾರೆ. ಆದರೂ ಇಲ್ಲಿನ ಪರಿಸ್ಥಿತಿ ಬೇರೆಯೇ ಇದೆ.

ಆಸ್ಪತ್ರೆಯಲ್ಲಿ ಸಮಸ್ಯೆ ಎದುರಿಸುತ್ತಿರುವ ಉಸ್ತುವಾರಿಗಳು:

ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಆಗಮಿಸುವ ಅನೇಕ ಉಸ್ತುವಾರಿಗಳು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಮತ್ತು ವೈದ್ಯರ ನೇಮಕಾತಿ ಕಾಯ್ದಿರಿಸಲು ಸಾಕಷ್ಟು ತೊಂದರೆಗಳಿವೆ ಎಂದು ರೋಗಿಗಳ ಕುಟುಂಬ ಸದಸ್ಯರು ಹೇಳುತ್ತಾರೆ. ಸರದಿಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಮತ್ತು ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲು ವೈದ್ಯರು ಸಹ ಹಿಂಜರಿಯುತ್ತಾರೆ.

ಆಮ್ಲಜನಕ ಪೂರೈಕೆಯಲ್ಲಿ ಕೊರತೆ:

ಆಮ್ಲಜನಕದ ಕೊರತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಮುನ್ನೆಚ್ಚರಿಕೆಯಾಗಿ ದ್ರವ ವೈದ್ಯಕೀಯ ಆಮ್ಲಜನಕವನ್ನು ತುಂಬಲು ಬಯಸುವವರು ಕೊರತೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿ ಐಸೊಲೇಷನ್​ನಲ್ಲಿರುವ ರೋಗಿಗಳಿಗೆ ಇದು ತೊಂದರೆಯಾಗಿದೆ.

ಆಮ್ಲಜನಕ ಪೂರೈಕೆಯಲ್ಲಿ ಕೊರತೆ

ಅಧಿಕಾರಿಗಳಿಂದ ಯಾವುದೇ ಸಹಾಯವಿಲ್ಲ:

ವಾರಾಣಸಿಯಲ್ಲಿ ಸ್ಥಾಪಿಸಲಾದ ಕೋವಿಡ್ ಕಮಾಂಡ್ ಸೆಂಟರ್​ಗೆ ವೆಂಟಿಲೇಟರ್‌ಗಳ ಲಭ್ಯತೆ ಮತ್ತು ಆಮ್ಲಜನಕದ ಪೂರೈಕೆಯ ಬಗ್ಗೆ ಕರೆ ಮಾಡಿದರೆ ಅವರು ಕೇವಲ ಭರವಸೆ ನೀಡುತ್ತಾರೆ. ಆದರೆ, ರೋಗಿಗಳಿಗೆ ಯಾವುದೇ ರೀತಿಯ ಸಹಾಯ ದೊರೆಯುವುದಿಲ್ಲ. ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ, ಜಿಲ್ಲಾಡಳಿತವು ಎಲ್ಲೆಡೆ ನೋಡಲ್ ಮತ್ತು ಸೆಕ್ಟರ್ ಮ್ಯಾಜಿಸ್ಟ್ರೇಟ್ ನಿಯೋಜಿಸಿದ್ದರೂ ಯಾವುದೇ ಪ್ರಯೋಜನವಿಲ್ಲ. ಅಲ್ಲದೇ, ಅಧಿಕಾರಿಗಳು ತಮ್ಮ ಫೋನ್ ಸ್ವಿಚ್ಡ್​ ಆಫ್ ಮಾಡಿರುವುದರಿಂದ ರೋಗಿಗಳು ಅಪಾರ ತೊಂದರೆ ಎದುರಿಸಬೇಕಾಗುತ್ತದೆ.

ಶವಸಂಸ್ಕಾರಕ್ಕಾಗಿ ಸರತಿ ಸಾಲು:

ವಾರಾಣಸಿಯಲ್ಲಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಪ್ರತಿದಿನ ಸುಮಾರು 10 ಸಾವುಗಳು ಸಂಭವಿಸುತ್ತಿವೆ. ಆದರೆ, ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್‌ನಲ್ಲಿ ಪ್ರತಿದಿನ ನೂರಾರು ಶವಸಂಸ್ಕಾರಗಳನ್ನು ನಡೆಸಲಾಗುತ್ತಿದೆ. ಶವಗಳನ್ನು ದಹಿಸಲು ಯಾವುದೇ ಉರುವಲು ಕೂಡ ದೊರೆಯುತ್ತಿಲ್ಲ. ಕೊರೊನಾ ಸೋಂಕಿತ ಶವಗಳನ್ನು ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿಲ್ಲ, ಆದರೂ ಮೃತ ದೇಹಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ, ಆಡಳಿತವು ಹರಿಶ್ಚಂದ್ರ ಘಾಟ್ ​​ಪಕ್ಕದಲ್ಲಿ ತಾತ್ಕಾಲಿಕ ದಹನ ಕೇಂದ್ರವನ್ನೂ ನಿರ್ಮಿಸಿದೆ. ಆದರೆ, ಈ ಕ್ರಮಗಳು ಜನಸಂದಣಿಯನ್ನು ಕಡಿಮೆ ಮಾಡಿಲ್ಲ ಮತ್ತು ಶವಸಂಸ್ಕಾರಕ್ಕೆ ಹಾಜರಾದವರು ಗಂಟೆಗಟ್ಟಲೆ ಕಾಯಬೇಕಾಗಿದೆ.

ಕೊರೊನಾ ಸೋಂಕಿತರ ಶವಸಂಸ್ಕಾರ

47 ಆಸ್ಪತ್ರೆಗಳು, 1700 ಹಾಸಿಗೆಗಳ ವ್ಯವಸ್ಥೆ:

10 ದಿನಗಳ ಅವಧಿಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು 800 ರಿಂದ 1700ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 46 ಕೋವಿಡ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 39 ಖಾಸಗಿ ಆಸ್ಪತ್ರೆಗಳು, 7 ಸರ್ಕಾರಿ ಆಸ್ಪತ್ರೆಗಳಿವೆ. ಮುಂದಿನ ದಿನಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇದಲ್ಲದೆ 850 ಹಾಸಿಗೆಗಳ ಸಾಮರ್ಥ್ಯವಿರುವ ತಾತ್ಕಾಲಿಕ ಆಸ್ಪತ್ರೆಯನ್ನು ಮುಂದಿನ ವಾರದ ವೇಳೆಗೆ ವಾರಣಾಸಿಯ ಬಿಎಚ್‌ಯು ಎಂಪಿ ಥಿಯೇಟರ್ ಮೈದಾನದಲ್ಲಿ ಸ್ಥಾಪಿಸಲಾಗುವುದು ಎಂದು. ಮುಂದಿನ ದಿನಗಳಲ್ಲಿ, ಆಮ್ಲಜನಕದ ಉತ್ಪಾದನೆಯು ಹೆಚ್ಚಾದಾಗ, ಇತರ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುವುದು. ಇದು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ 2000 ಹಾಸಿಗೆಗಳು ಇರಲಿದೆ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.

ಬೆಡ್ ವ್ಯವಸ್ಥೆ

ಸುಮಾರು 40 ಪ್ರತಿಶತ ಆಮ್ಲಜನಕ ಪೂರೈಕೆ:

ಸುಮಾರು 150 ಹಾಸಿಗೆಗಳಿಗೆ ಆಮ್ಲಜನಕ ಒದಗಿಸಲು 75 ಆಮ್ಲಜನಕ ಸಾಂದ್ರಕಗಳನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ಆಡಳಿತವು ಚಲಾವಣೆಯಲ್ಲಿರುವ 600 ಹೊಸ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದೆ. 200 ಸಿಲಿಂಡರ್‌ಗಳನ್ನು ಮಿರ್ಜಾಪುರ ಆಕ್ಸಿಜನ್ ಪ್ಲಾಂಟ್‌ನಿಂದ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2 - 3 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಯೋಜನೆ ಇದ್ದು, ಇದರಿಂದಾಗಿ ಆಮ್ಲಜನಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಪ್ರಸ್ತುತ, ಕೇವಲ 30 ರಿಂದ 40 ಪ್ರತಿಶತದಷ್ಟು ಆಮ್ಲಜನಕವನ್ನು ಮಾತ್ರ ರೋಗಿಗಳಿಗೆ ಪೂರೈಸಲಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು 100 ಪ್ರತಿಶತದಷ್ಟು ಇರಲಿದೆ.

ಬೆಡ್ ವ್ಯವಸ್ಥೆ

600 ವೆಂಟಿಲೇಟರ್ ಹಾಸಿಗೆಗಳು:

ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರ ಪ್ರಕಾರ, ಒಟ್ಟು 1700ರಲ್ಲಿ 600 ಹಾಸಿಗೆಗಳನ್ನು ವಾರಣಾಸಿ ಜಿಲ್ಲೆಗೆ ಕಾಯ್ದಿರಿಸಲಾಗಿದೆ. ಇವುಗಳಲ್ಲಿ, ವೆಂಟಿಲೇಟರ್‌ಗಳು ಸುಮಾರು 150 ಮತ್ತು ಉಳಿದವು 450 ಇವೆ. ಹೆಚ್ಚುವರಿಯಾಗಿ, ಆಮ್ಲಜನಕ ಸೌಲಭ್ಯದೊಂದಿಗೆ 1100 ಹಾಸಿಗೆಗಳಿವೆ, ಮತ್ತು 250 ಹಾಸಿಗೆಗಳೊಂದಿಗೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತಿದೆ.

95,65,631 ಜನರಿಗೆ ಕೊರೊನಾ ಟೆಸ್ಟ್:

ವಾರಣಾಸಿಯಲ್ಲಿ ಕೊರೊನಾ ತಡೆಗೆ ವ್ಯವಸ್ಥೆ

ಇಲ್ಲಿಯವರೆಗೆ, ವಾರಾಣಸಿ ಜಿಲ್ಲೆಯಲ್ಲಿ 95,65,631 ಜನರನ್ನು ಕೊರೊನಾ ಟೆಸ್ಟ್​ಗೆ ಒಳಪಡಿಸಲಾಗಿದೆ. ಅವರಲ್ಲಿ, 8,69,851 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಪ್ರಸ್ತುತ, ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತ ರೋಗಿಗಳ ಸಂಖ್ಯೆ 18,807 ಆಗಿದೆ.

2,71,637 ಜನರಿಗೆ ಲಸಿಕೆ:

ಲಸಿಕೆ ಪಡೆಯಲು ಬಂದ ಜನ

ಕೊರೊನಾದಿಂದ ಜನರನ್ನು ಸುರಕ್ಷಿತವಾಗಿರಿಸಲು ನಿತ್ಯ 5000 ಜನರಿಗೆ ಲಸಿಕೆ ಹಾಕುವ ಮೂಲಕ ವ್ಯಾಕ್ಸಿನೇಷನ್ ಅಭಿಯಾನವನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 2,71,607 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಇದರಲ್ಲಿ 40,690 ಆರೋಗ್ಯ ಕಾರ್ಯಕರ್ತರು, 43,100 ಮುಂಚೂಣಿ ಕಾರ್ಮಿಕರು, 45 ವರ್ಷಕ್ಕಿಂತ ಮೇಲ್ಪಟ್ಟ 1,87,847 ಫಲಾನುಭವಿಗಳು ಸೇರಿದ್ದಾರೆ.

ABOUT THE AUTHOR

...view details