ಬೆತುಲ್(ಮಧ್ಯಪ್ರದೇಶ):ರಾಜ್ಯದ ಬೇತುಲ್ ಜಿಲ್ಲೆಯ ಶಹಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪವರ್‌ಜಾಂಡದಡಿ ಜಮುಂಧಾನ ನದಿಗೆ ಸೇತುವೆ ಇಲ್ಲದೆ ಜನ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದೆ. ಬುಧವಾರ ಗ್ರಾಮಸ್ಥರು ಗರ್ಭಿಣಿಯನ್ನು ಮಂಚದ ಮೇಲೆ ಹೊತ್ತು ಪ್ರಾಣ ಪಣಕ್ಕಿಟ್ಟು ನದಿ ದಾಟಿ ಆಸ್ಪತ್ರೆಗೆ ಕರೆದೊಯ್ದರು. ಹಲವು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಇದುವರೆಗೂ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ನದಿಗೆ ಸೇತುವೆ ಇಲ್ಲದೆ ಜನರ ಸಂಕಷ್ಟ: ಗರ್ಭಿಣಿಯನ್ನು ಹೊತ್ತು ಸಾಗಿದ ಗ್ರಾಮಸ್ಥರು - ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಬೆತುಲ್ ಜನರು
ಇದೇ ಆಗಸ್ಟ್ 15ಕ್ಕೆ ದೇಶವು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ. ಹೀಗಿದ್ದರೂ ದೇಶದ ಗ್ರಾಮೀಣ ಪ್ರದೇಶಗಳು ಇನ್ನೂ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಸೇತುವೆ ಇಲ್ಲದೇ ಸಮಸ್ಯೆ ಎದುರಿಸುತ್ತಿರುವ ಜನರ