ಕರ್ನಾಟಕ

karnataka

By

Published : Nov 25, 2022, 3:35 PM IST

ETV Bharat / bharat

ಲಚಿತ್ ಬರ್ಫುಕನ್ ಜೀವನ ನಮಗೆ ಸ್ಫೂರ್ತಿ: ಪ್ರಧಾನಿ ನರೇಂದ್ರ ಮೋದಿ ಗುಣಗಾನ

ಭಾರತದ ಇತಿಹಾಸ ಎಂದರೆ ಬರೀ ಗುಲಾಮಗಿರಿ ಪದ್ಧತಿಯಿಂದ ಕೂಡಿರುವುದು ಅಲ್ಲ, ಭಾರತದ ಇತಿಹಾಸ ಯೋಧರ, ವಿಜಯದ, ತ್ಯಾಗದ, ನಿಸ್ವಾರ್ಥತೆ ಮತ್ತು ಶೌರ್ಯವನ್ನು ಒಳಗೊಂಡ ಶ್ರೇಷ್ಠ ಇತಿಹಾಸ.

Lachit Barphukan's life is our inspiration: PM Narendra Modi
ಲಚಿತ್ ಬರ್ಫುಕನ್ ಅವರ ಜೀವನ ನಮಗೆ ಸ್ಫೂರ್ತಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಸಾಹತುಶಾಹಿ ಯುಗದ ಅವಧಿಯಲ್ಲಿ ಕಳೆದು ಹೋದ ವೈವಿಧ್ಯಮಯ ಪರಂಪರೆಯನ್ನು ಭಾರತ ಈಗ ಆಚರಿಸುತ್ತಿದೆ. ತನ್ನ ಇತಿಹಾಸದ ಪುಟಗಳಲ್ಲಿ ಮರೆಮಾಚಿ ಹೋದ ಭಾರತದ ಅಸಾಧಾರಣ ಅನೇಕ ವೀರರನ್ನು ನೆನೆಪಿಸಿಕೊಳ್ಳುತ್ತಾ ಗೌರವ ಸಮರ್ಪಿಸುತ್ತಿದೆ. ಈ ಮೂಲಕ ಭಾರತ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಚಿತ್ ಬರ್ಫುಕನ್ ಅವರ 400 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಹೇಳಿದರು.

ಬರ್ಫುಕನ್ ಅವರ ಜನ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಇತಿಹಾಸ ಎಂದರೆ ಬರೀ ಗುಲಾಮಗಿರಿ ಪದ್ಧತಿಯಿಂದ ಕೂಡಿರುವುದು ಅಲ್ಲ, ಭಾರತದ ಇತಿಹಾಸ ಯೋಧರ, ವಿಜಯದ, ತ್ಯಾಗದ, ನಿಸ್ವಾರ್ಥತೆ ಮತ್ತು ಶೌರ್ಯವನ್ನು ಒಳಗೊಂಡ ಶ್ರೇಷ್ಟ ಇತಿಹಾಸ. ಸ್ವಾತಂತ್ರ್ಯದ ನಂತರವೂ, ವಸಾಹತುಶಾಹಿ ಯುಗದಲ್ಲಿ ಏನು ದಾಖಲಾಗಿತ್ತೋ ಅದರ ಬದಲಾವಣೆ ಅಗತ್ಯವಿತ್ತು.

ಆದರೆ, ಅದು ನಡೆಯಲಿಲ್ಲ. ದುರದೃಷ್ಟವಶಾತ್ ಈಗಲೂ ಅದೇ ಪಿತೂರಿಂದ ಕೂಡಿದ ಇತಿಹಾಸವನ್ನು ಕಲಿಸಲಾಗುತ್ತಿದೆ. ಭಾರತ ದೇಶದ ಮೂಲೆಮೂಲೆಯಲ್ಲಿ ವೀರ ಪುತ್ರರು ಮತ್ತು ಪುತ್ರಿಯರು ಸ್ವಾತಂತ್ರ್ಯಕ್ಕಾಗಿ ದಮನಕಾರಿಗಳ ವಿರುದ್ಧ ಹೋರಾಡಿ ಮಣಿದರು. ಆದರೆ ಆ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಯಿತು ಎಂದು ಪ್ರಧಾನಿ ಹೇಳಿದರು.

ದೇಶಕ್ಕಿಂತ ದೊಡ್ಡ ಸಂಬಂಧ ಯಾವುದಿಲ್ಲ:ಮುಂದುವರಿದು ಮಾತನಾಡಿದ ಅವರು, ಇಂದು ಭಾರತ ಎಲ್ಲ ವಸಾಹತುಶಾಹಿಯ ಸಂಕೋಲೆಗಳನ್ನು ಮುರಿದು ನಮ್ಮ ಪರಂಪರೆ ಆಚರಿಸುತ್ತಾ ನಮ್ಮ ವೀರರನ್ನು ಹೆಮ್ಮೆಯಿಂದ ಸ್ಮರಿಸುತ್ತಾ ಮುನ್ನಡೆಯುತ್ತಿದೆ. ಲಚಿತ್ ಬರ್ಫುಕನ್ ರಕ್ತ ಸಂಬಂಧಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಯನ್ನು ತನ್ನ ಗುರಿಯಾಗಿಟ್ಟುಕೊಂಡಿದ್ದರು.

ದೇಶಕ್ಕೆ ದ್ರೋಹ ಬಗೆದದು ತನ್ನ ಸಂಬಂಧಿಯಾಗಿದ್ದರು ಅವರನ್ನು ಶಿಕ್ಷಿಸಲು ಹಿಂಜರಿಯುತ್ತಿರಲಿಲ್ಲ. ಬರ್ಫುಕನ್ ಅವರ ಜೀವನವು ನಮಗೆ ಸ್ಫೂರ್ತಿ ನೀಡುತ್ತದೆ. ದೇಶಕ್ಕಿಂತ ದೊಡ್ಡ ಸಂಬಂಧ ಯಾವುದಿಲ್ಲ ಎಂಬುದು ನಾವು ಅವರಿಂದ ಕಲಿಯಬೇಕಿದೆ ಎಂದರು.

ABOUT THE AUTHOR

...view details