ಕರ್ನಾಟಕ

karnataka

ETV Bharat / bharat

ಭಾರಿ ಮಳೆ: ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ಭಾರಿ ಮಳೆಯಿಂದ ಸುನಾರ್ ನದಿಯ ನೀರಿನ ಮಟ್ಟ ರಾತ್ರೋರಾತ್ರಿ ಹೆಚ್ಚಾಗಿದೆ. ಇದರಿಂದಾಗಿ ಗೋಲ್ಡ್ ಸ್ಮಿತ್ ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಕಂಬದ ಮೇಲೆ ಸಿಲುಕಿಕೊಂಡು ಪರದಾಡುತ್ತಿದ್ದ. ಈ ವೇಳೆ ಇತರೆ ಕಾರ್ಮಿಕರು ಹಗ್ಗಗಳ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ.

ಕಾರ್ಮಿಕನ ರಕ್ಷಣೆ
ಕಾರ್ಮಿಕನ ರಕ್ಷಣೆ

By

Published : Jun 10, 2021, 4:48 PM IST

ಸಾಗರ್ (ಮಧ್ಯಪ್ರದೇಶ):ಇಲ್ಲಿನ ಸಾಗರ್​​ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸುನಾರ್ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಮೇಲ್ಸೇತುವೆ ಕಂಬಕ್ಕೆ ಸಿಲುಕಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ.

ಸಾಗರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ನದಿಗಳು ಮತ್ತು ತೊರೆಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಇಲ್ಲಿನ ಸುನಾರ್ ನದಿಯ ನೀರಿನ ಮಟ್ಟವೂ ರಾತ್ರೋರಾತ್ರಿ ಹೆಚ್ಚಾಗಿದೆ. ಇದರಿಂದಾಗಿ ಗೋಲ್ಡ್ ಸ್ಮಿತ್ ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಕಂಬದ ಮೇಲೆ ಸಿಲುಕಿಕೊಂಡು ಪರದಾಡುತ್ತಿದ್ದ. ಈ ವೇಳೆ ಇತರೆ ಕಾರ್ಮಿಕರು ಹಗ್ಗಗಳ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ. ಈತ ಕೆಲಸ ಮಾಡಿ ರಾತ್ರಿ ಅಲ್ಲೇ ಮಲಗಿದ್ದ ಎಂದು ಹೇಳಲಾಗುತ್ತಿದೆ.

ಉಕ್ಕಿ ಹರಿಯುತ್ತಿದ್ದ ನದಿಯಿಂದ ಕಾರ್ಮಿಕನ ರಕ್ಷಣೆ

ಬುಂದೇಲ್‌ಖಂಡ್ ಮತ್ತು ಸಾಗರ್‌ನಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಪ್ರಾರಂಭವಾದ ಮಳೆ ಇನ್ನೂ ಸುರಿಯುತ್ತಿದೆ. ಹಾಗಾಗಿ ಸಾಗರ್‌ನ ರೆಹಾಲಿಯ ಸುನಾರ್ ನದಿ ಅಪಾಯಮಟ್ಟ ಮೀರುತ್ತಿದೆ.

ABOUT THE AUTHOR

...view details