ಕುರುಕ್ಷೇತ್ರ: ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಡೆಯನ್ನು ಖಂಡಿಸಿದ್ದ ಜನನಾಯಕ್ ಜನತಾ ಪಕ್ಷದ ಶಾಹಬಾದ್ ಶಾಸಕ ರಾಮ್ಕರಣ್ಗೆ ಯಾರಿಯ ಕಲಾ ಗ್ರಾಮದ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರುಕ್ಷೇತ್ರ: ಶಾಹಬಾದ್ ಶಾಸಕ ರಾಮ್ಕರಣ್ಗೆ ರೈತರಿಂದ ಮುತ್ತಿಗೆ - ಶಾಹಬಾದ್ ಶಾಸಕ ರಾಮ್‌ಕರಣ್
ಶಾಹಬಾದ್ ಶಾಸಕ ರಾಮ್‌ಕರಣ್ ಯಾರಿಯ ಕಲಾ ಗ್ರಾಮದಲ್ಲಿರುವ ಪಂಚಾಯಿತಿಗೆ ತೆರಳಿದಾಗ ರೈತರು ತೀವ್ರವಾಗಿ ವಿರೋಧಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸದ್ಯ ಸ್ಥಳದಲ್ಲಿದ್ದ ಪೊಲೀಸರು ಶಾಸಕನನ್ನು ರಕ್ಷಿಸಿದ್ದಾರೆ.

ಶಾಹಬಾದ್ ಶಾಸಕ ರಾಮ್ಕರಣ್ಗೆ ರೈತರಿಂದ ಮುತ್ತಿಗೆ
ಶಾಹಬಾದ್ ಶಾಸಕ ರಾಮ್ಕರಣ್ಗೆ ರೈತರಿಂದ ಮುತ್ತಿಗೆ
ಶಾಸಕ ಯಾರಿ ಗ್ರಾಮದ ಪಂಚಾಯಿತಿಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ರೈತರು ರಾಮ್‌ಕರಣ್ ಕಾರಿನ ಮುಂದೆ ಕುಳಿತು ಪ್ರತಿಭಟಿಸಿದ್ದಾರೆ.
ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ರಾಮ್ಕರಣ್ರನ್ನು ರಕ್ಷಿಸಿ ಕಾರಿನಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.