ನವದೆಹಲಿ:ಆಸ್ಪತ್ರೆಯಿಂದ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಗೋಗಿ ಗ್ಯಾಂಗ್ನ ನಟೋರಿಯಸ್ ರೌಡಿ ಕುಲದೀಪ್ ಮಾನ್ ಅಲಿಯಾಸ್ ಫಜ್ಜಾ ಶನಿವಾರ ತಡರಾತ್ರಿ ರೋಹಿಣಿ ಸೆಕ್ಟರ್ 14 ರ ತುಳಸಿ ಅಪಾರ್ಟ್ಮೆಂಟ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಪಾತಕಿ ಫಜ್ಜಾ ಎನ್‌ಕೌಂಟರ್‌ನಲ್ಲಿ ಸಾವು - fazza encounter
ದೆಹಲಿಯ ಜಿಟಿಬಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಪಾತಕಿ ಕುಲದೀಪ್ ಅಲಿಯಾಸ್ ಫಜ್ಜಾ ನಿನ್ನೆ ರಾತ್ರಿ ನಡೆದ ಎನ್ಕೌಂಟರ್ ವೇಳೆ ಸಾವನ್ನಪ್ಪಿದ್ದಾನೆ.
ಫಜ್ಜಾ ಎನ್‌ಕೌಂಟರ್‌ನಲ್ಲಿ ಸಾವು
ಕಳೆದ ಗುರುವಾರ ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಬಳಿಕ ಪೊಲೀಸ್ ವಾಹನದ ಬಳಿ ಕರೆದೊಯ್ಯುವಾಗ ನಡೆದ ಗುಂಡಿನ ಕಾಳಗದ ವೇಳೆ ಆರೋಪಿ ಫಜ್ಜಾ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದ. ಜಿಟಿಬಿ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಫಜ್ಜಾ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.