ಕರ್ನಾಟಕ

karnataka

ETV Bharat / bharat

ಸರ್ಕಾರಿ ಕಾನೂನು ಕಾಲೇಜ್​​ನಲ್ಲಿ ಕೆಎಸ್​​ಯು-ಎಸ್​​ಎಫ್​ಐ ನಡುವೆ ಫೈಟ್​​.. ಮಹಿಳಾ ಮುಖಂಡೆ ಮೇಲೆ ಹಲ್ಲೆ.. - ಕೆಎಸ್​​ಯು-ಎಸ್​​ಎಫ್​ಐ ನಡುವೆ ಫೈಟ್

ಕಾಲೇಜ್​ ಚುನಾವಣೆಯಲ್ಲಿ ಗೆಲುವು ಸಾಧಿಸಿ, ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಕೇರಳ ಸ್ಟೂಡೆಂಟ್ಸ್​ ಯೂನಿಯನ್ ಮತ್ತು ಸ್ಟೂಡೆಂಟ್ಸ್​​ ಫೆಡರೇಶನ್​ ಆಫ್​ ಇಂಡಿಯಾ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಮಾರಾಮಾರಿಯಾಗಿದೆ..

KSU woman KSU woman leader clash leader clash
KSU woman leader clash

By

Published : Mar 16, 2022, 5:37 PM IST

ತಿರುವನಂತಪುರಂ(ಕೇರಳ) :ಕೇರಳದ ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜ್​​ನಲ್ಲಿ ಕೆಎಸ್​​ಯು(ಕೇರಳ ಸ್ಟೂಡೆಂಟ್ಸ್ ಯೂನಿಯನ್)​​ ಮತ್ತು ಎಸ್​​ಎಫ್ಐ(ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟವಾಗಿದ್ದು, ಕೆಎಸ್​​ಯು ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಸಫ್ನಾ ಯಾಕೂಬ್​ ಅವರನ್ನ ನಡುರಸ್ತೆಯಲ್ಲೇ ಅಮಾನವೀಯ ರೀತಿಯಲ್ಲಿ ಥಳಿಸಲಾಗಿದೆ ಎಂದು ವರದಿಯಾಗಿದೆ.

ತಿರುವನಂತಪುರಂ ಕಾನೂನು ಕಾಲೇಜ್​ನಲ್ಲಿ KSU-SFI ನಡುವೆ ಫೈಟ್..​​

ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜ್​​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಇದನ್ನೂ ಓದಿರಿ:ಪಂಜಾಬ್‌ಗೆ ಇನ್ಮೇಲೆ ಶಕ್ತಿ'ಮಾನ್‌' ಆಡಳಿತ.. ಪದಗ್ರಹಣ ಬಳಿಕ ಸಿಎಂ ಮೊದಲ ಆದೇಶ ಬಲು ಖಡಕ್‌..

ಕಾಲೇಜ್​ ಯೂನಿಯನ್​ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್​ಯೂ ಮತ್ತು ಎಸ್​​​ಎಫ್​ಐ ನಡುವೆ ವಾಗ್ವಾದವಾಗಿದೆ. ಕೆಎಸ್​​ಯು ಸದಸ್ಯರು ಕಾಲೇಜ್​ ಚುನಾವಣೆಯಲ್ಲಿ ಗೆಲುವು ಸಾಧಿಸಿ, ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಮೊದಲು ಕೆಎಸ್​ಯು ಕಾರ್ಯಕರ್ತ ಆಶಿಕ್ ಮೇಲೆ ಹಲ್ಲೆ ನಡೆಸಲಾಗಿದ್ದು, ಇದನ್ನ ತಡೆಯಲು ಮುಂದಾದಾಗ ಸಫ್ನಾ ಹಾಗೂ ಇತರ ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details