ಕರ್ನೂಲ್(ಆಂಧ್ರಪ್ರದೇಶ):ಕರ್ತವ್ಯನಿರತ ಕರ್ನಾಟಕ ಸಾರಿಗೆ ಬಸ್ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತುಮಕೂರು ಡಿಪೋ-2ರಲ್ಲಿ ನಿರ್ವಾಹಕರಾಗಿದ್ದ ತಿಪ್ಪೇಸ್ವಾಮಿ ಎಂಬುವರೇ ಮೃತಪಟ್ಟ ಕಂಡಕ್ಟರ್ ಆಗಿದ್ದಾರೆ. ಇವರು ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಕರ್ತವ್ಯದಲ್ಲಿದ್ದರು. ಕರ್ನೂಲ್ನ ಢಾಣಾಪುರ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ, ಬಳಿಕ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿದ್ದರು. ಆದರೆ ಬಸ್ ಬಾಗಿಲು ಹಾಕಿಕೊಂಡು ಸೀಟಿನಲ್ಲಿ ಕುಳಿತುಕೊಳ್ಳಲು ಬರುತ್ತಿದ್ದಾಗಲೇ ತಿಪ್ಪೇಸ್ವಾಮಿ ದಿಢೀರ್ ಕುಸಿದು ಬಿದ್ದಿದ್ದಾರೆ.