ಕರ್ನಾಟಕ

karnataka

ETV Bharat / bharat

ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ಪರಿಶೀಲನೆ ಸಂಬಂಧದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ - ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧ ಶಾಹಿ ಈದ್ಗಾ ಮಸೀದಿಯ ಪರಿಶೀಲನೆಗೆ ಆಯುಕ್ತರನ್ನು ನೇಮಕ ಮಾಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ ನೀಡಿದೆ.

krishna-janmabhoomi-case-sc-stays-hc-order-appointing-advocate-commissioner-to-inspect-shahi-eidgah
ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ಪರಿಶೀಲನೆಗೆ ಆಯುಕ್ತರ ನೇಮಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

By ETV Bharat Karnataka Team

Published : Jan 16, 2024, 4:05 PM IST

ನವದೆಹಲಿ: ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧ ಶಾಹಿ ಈದ್ಗಾ ಮಸೀದಿಯ ಪರಿಶೀಲನೆಗೆ ಆಯುಕ್ತರನ್ನು ನೇಮಿಸಿದ ಅಲಹಾಬಾದ್ ಹೈಕೋರ್ಟ್ ಆದೇಶದ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಹಿಂದೂ ಸಂಘಟನೆಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರಿಗೆ, ನೀವು ನ್ಯಾಯಾಲಯಕ್ಕೆ ಕಮಿಷನರ್ ನೇಮಕ ಕುರಿತಂತೆ ಅಸ್ಪಷ್ಟ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಬಗೆಗಿನ ಉದ್ದೇಶವು ಬಹಳ ನಿರ್ದಿಷ್ಟವಾಗಿರಬೇಕು. ಅದರ ಪರಿಶೀಲನೆಗೆ ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ಜನವರಿ 23, 2024 ರೂಳಗೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟೀಸ್ ನೀಡಿತು. ಹೈಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಂದುವರಿಸಬಹುದು ಆದರೆ ಅಲ್ಲಿಯವರೆಗೆ ಕಮಿಷನರ್‌ ನೇಮಕದ ಆದೇಶವನ್ನು ಕಾರ್ಯಗತಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಸೀದಿ ಸಮಿತಿ ಪರ ವಾದ ಮಂಡಿಸಿದ ವಕೀಲರು, ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ ಮತ್ತು ಆ ಆಧಾರದ ಮೇಲೆ ಮಧ್ಯಂತರ ಪರಿಹಾರದ ಮಂಜೂರಾತಿಯನ್ನು ವಿರೋಧಿಸುವ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಈ ವಿಚಾರವಾಗಿ ಕಾನೂನು ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ಸ್ಥಳೀಯ ಆಯುಕ್ತರ ನೇಮಿಸಬೇಕು ಎಂಬ ಆದೇಶ ತುಂಬಾ ಅಸ್ಪಷ್ಟವಾಗಿದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಶಾಹಿ ಈದ್ಗಾ ನಿರ್ಮಾಣವಾಗಿದ್ದು, ಯಾವಾಗ?: ಶಾಹಿ ಈದ್ಗಾ ಮಸೀದಿಯು ಮಥುರಾ ನಗರದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಸಂಕೀರ್ಣದ ಪಕ್ಕದಲ್ಲಿದೆ. ಈ ಸ್ಥಳವನ್ನು ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಆ ಬಳಿಕ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲಾಗಿತ್ತು ಎಂಬ ವಾದವಿದೆ. 1669-70 ರಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

1935ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 13.37 ಎಕರೆ ಭೂಮಿಯನ್ನು ಬನಾರಸ್‌ನ ರಾಜಾ ಕೃಷ್ಣ ದಾಸ್‌ಗೆ ಮಂಜೂರು ಮಾಡಿತ್ತು. 1951 ರಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಟ್ರಸ್ಟ್ ಅನ್ನು 1958 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು 1977 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಹೆಸರಿನಲ್ಲಿ ನೋಂದಾಯಿಸಲಾಗಿದೆ. 1968 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ಸಮಿತಿಯ ನಡುವಿನ ಒಪ್ಪಂದದಲ್ಲಿ ಟ್ರಸ್ಟ್ ಈ 13.37 ರ ಮಾಲೀಕತ್ವ ಪಡೆದುಕೊಂಡಿತ್ತು. ಎಕರೆಗಟ್ಟಲೆ ಜಮೀನು ಮತ್ತು ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ಆಗ ವಹಿಸಲಾಗಿತ್ತು. ಇದರ ನಂತರ, ಈ ವಿಷಯದ ಕುರಿತಾಗಿ ನಿರಂತರವಾಗಿ ವಾದ - ಪ್ರತಿವಾದಗಳು ನಡೆಯುತ್ತಲೇ ಬಂದಿವೆ.

ಇದನ್ನೂ ಓದಿ:ಸುಳ್ಳು ಮೊಕದ್ದಮೆ ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಅಗತ್ಯ; ಸುಪ್ರೀಂಕೋರ್ಟ್

ABOUT THE AUTHOR

...view details