ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ಎಫೆಕ್ಟ್​​: ಆದಾಯ ಮೂಲ ಕಳೆದುಕೊಂಡ ರೈತರಿಂದ "ಹಾಲು ಸ್ನಾನದ ಪ್ರತಿಭಟನೆ" - dairy farmers stage milk

ಕೊಜಿಕೋಡ್ ಜಿಲ್ಲೆಯ ಕರಸೆರಿ ಪಂಚಾಯತ್‌ನ ಚುಂಡತುಂಪೊಯಿಲ್‌ನಲ್ಲಿ ಜಮಾಯಿಸಿದ ರೈತರು, ಹಠಾತ್ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಹಾಲನ್ನು ತಲೆಗೆ ಸುರಿದುಕೊಂಡು, ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು..

ಹಾಲು ಸ್ನಾನದ ಪ್ರತಿಭಟನೆ
ಹಾಲು ಸ್ನಾನದ ಪ್ರತಿಭಟನೆ

By

Published : May 19, 2021, 4:00 PM IST

ಕೊಜಿಕೋಡ್ (ಕೇರಳ):​ ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿನ ಸರ್ಕಾರ ಸಂಜೆ ಹಾಲು ಸಂಗ್ರಹವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೇರಳ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ "ಹಾಲು ಸ್ನಾನದ ಪ್ರತಿಭಟನೆ" ನಡೆಸಲಾಯಿತು.

ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆಯಾ ರಾಜ್ಯಗಳು ಲಾಕ್​ಡೌನ್​ ಘೋಷನೆ ಮಾಡಿದ್ದು, ಅದರಂತೆ ಕೇರಳ ಸರ್ಕಾರ ಕೂಡ ಎಲ್ಲದಕ್ಕೂ ನಿರ್ಬಂಧ ಹೇರಿ ಇದೀಗ ಸಂಜೆ ಹಾಲು ಸಂಗ್ರಹವನ್ನು ಕೂಡ ಸ್ಥಗಿತಗೊಳಿಸಿದೆ.

ಇದರಿಂದ ಕೊಜಿಕೋಡ್ ಜಿಲ್ಲೆಯ ಕರಸೆರಿ ಪಂಚಾಯತ್‌ನ ಚುಂಡತುಂಪೊಯಿಲ್‌ನಲ್ಲಿ ಜಮಾಯಿಸಿದ ರೈತರು, ಹಠಾತ್ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಹಾಲನ್ನು ತಲೆಗೆ ಸುರಿದುಕೊಂಡು, ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ಆದಾಯ ಮೂಲ ಕಳೆದುಕೊಂಡ ರೈತರಿಂದ "ಹಾಲು ಸ್ನಾನದ ಪ್ರತಿಭಟನೆ"

ಲಾಕ್​​ಡೌನ್​​ನಲ್ಲಿ ನಮಗೆ ಇತರೆ ಆದಾಯ ಮೂಲ ಹುಡುಕಿಕೊಳ್ಳುವುದು ಕಷ್ಟವಾಗಿದೆ. ಅನೇಕ ಬಡ ಕುಟುಂಬಗಳಿಗೆ ಮೂಲವಾದ ಸಂಜೆಯ ಹಾಲು ಸಂಗ್ರಹವನ್ನು ಹಠಾತ್ತನೆ ನಿಲ್ಲಿಸಿ ಅನಿರೀಕ್ಷಿತ ಬಿಕ್ಕಟ್ಟಿಗೆ ತಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ABOUT THE AUTHOR

...view details