ಚಂಡೀಗಢ:ಕೊಟಕಪುರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಏ.6 ರಂದು ಸಾಮಾನ್ಯ ಜನರು ಯಾವುದೇ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ಎಲ್‌ಕೆ ಯಾದವ್ ಹೇಳಿದ್ದಾರೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎಲ್.ಕೆ. ಯಾದವ್, ಎಡಿಜಿಪಿ, ಕಚೇರಿಯ 6ನೇ ಮಹಡಿ, ಪಂಜಾಬ್ ಪೊಲೀಸ್ ಹೆಡ್ಕ್ವಾಟರ್ಸ್, ಸೆಕ್ಟರ್ 9-C ವಿಳಾಸದಲ್ಲಿ ಜನರು ಭೇಟಿ ಮಾಡಬಹುದು.
ಇಲ್ಲಿದೆ ದೂರವಾಣಿ ಸಂಖ್ಯೆ, ಇ-ಮೇಲ್ ಮಾಹಿತಿ:2015ರ ಅಕ್ಟೋಬರ್ 14ರಂದು ನಡೆದ ಕೋಟಕಪುರ ಗುಂಡಿನ ದಾಳಿ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಈ ಬಗ್ಗೆ ಉಲ್ಲೇಖಿಸಬಹುದು. ವಾಟ್ಸ್ಆ್ಯಪ್ ಸಂಖ್ಯೆ 98759 83237 ಅಥವಾ ಇ-ಮೇಲ್ ಐಡಿಗೆ ಸಂದೇಶ ಕಳುಹಿಸಬಹುದು. newsit2021kotkapuracase@gmail.com ಗೆ ಇ-ಮೇಲ್ ಮಾಡುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದು. ಈ ಹಂತದಲ್ಲಿ ಯಾವುದೇ ಜವಾಬ್ದಾರಿಯುತ ವ್ಯಕ್ತಿ ನೀಡಿದ ಯಾವುದೇ ಮಾಹಿತಿಯನ್ನು ಎಸ್‌ಐಟಿ ಪರಿಗಣಿಸಲಿದೆ. ಇದರಿಂದ ತನಿಖೆಯನ್ನು ಕಾನೂನು ಪ್ರಕ್ರಿಯೆ ಮೂಲಕ ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಎಸ್‌ಐಟಿ ವಹಿಸಿರುವ ಈ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಪಂಜಾಬ್ ಜನರು ನೀಡಿರುವ ಬೆಂಬಲಕ್ಕೆ ಎಡಿಜಿಪಿ ಧನ್ಯವಾದ ಅರ್ಪಿಸಿದರು. ಪಂಜಾಬ್‌ನ ಯಾವುದೇ ವ್ಯಕ್ತಿ ನೀಡಿದ ಮಾಹಿತಿಯು ಕೋಟಕ್‌ಪುರ ಗುಂಡಿನ ಘಟನೆಗೆ ಸಂಬಂಧಿಸಿದ ತನಿಖೆಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಉಪಯುಕ್ತವಾಗಿದೆ ಎಂದು ಅವರು ಹೇಳಿದರು.