ಕೋಟಾ(ರಾಜಸ್ಥಾನ):ಐಐಟಿಗೆ ಕೋಚಿಂಗ್ ಪಡೆಯುತ್ತಿದ್ದ 16 ವರ್ಷದ ವಿದ್ಯಾರ್ಥಿಯೊಬ್ಬ ಸಲಿಂಗಕಾಮದ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ರಾಜಸ್ಥಾನದ ಕೋಟಾದ ಹಾಸ್ಟೆಲ್‌ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜವಾಹರ್ ನಗರ ಪೊಲೀಸರ ಪ್ರಕಾರ, ವಿದ್ಯಾರ್ಥಿ ಮಧ್ಯಪ್ರದೇಶದ ಛಿಂದ್ವಾರಾ ನಿವಾಸಿ. ಈತನ ಶವದ ಬಳಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದೆ. ಆತ್ಮಹತ್ಯೆ ಪತ್ರದ ಪ್ರಕಾರ, ತನ್ನ ಹೆತ್ತವರ ಕ್ಷಮೆಯಾಚಿಸಿದ್ದಾನೆ. ತನ್ನ ಸಹೋದರನ ಅಧ್ಯಯನದ ಖರ್ಚಿನ ಬಗ್ಗೆ ಕಾಳಜಿಯನ್ನೂ ತೋರಿಸಿದ್ದಾನೆ. ಅದರಂತೆ, ತನ್ನ ಸಲಿಂಗಕಾಮ ಮತ್ತು ತಾನು ಪ್ರೀತಿ ಮಾಡುತ್ತಿದ್ದ ಯುವಕನ ಬಗ್ಗೆಯೂ ಉಲ್ಲೇಖಿಸಿದ್ದಾನೆ. ಅಧ್ಯಯನದಲ್ಲಿ ವಿಫಲನಾಗಿದ್ದೇನೆ. ಆದರೆ, ಸಂಗಾತಿಯ ಮೇಲೆ ನಿಜವಾದ ಪ್ರೀತಿ ಇತ್ತು ಎಂದು ಬರೆದಿದ್ದಾನೆ.