ಕರ್ನಾಟಕ

karnataka

ETV Bharat / bharat

ವಿಸ್ಮಯಾ ಆತ್ಮಹತ್ಯೆ ಪ್ರಕರಣ: ಬಲವಾದ ಪುರಾವೆ ಲಭ್ಯವಾಗಿವೆ ಎಂದ ತನಿಖಾಧಿಕಾರಿ - ವಿಸ್ಮಯಾ ಸೂಸೈಡ್​ ಕೇಸ್​

ಗಂಡನ ಮನೆಯವರ ವರದಕ್ಷಿಣೆ ಭೂತಕ್ಕೆ 24 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದ್ದು, ಇದರ ವಿಚಾರಣೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Kollam dowry death
Kollam dowry death

By

Published : Jun 23, 2021, 3:34 PM IST

Updated : Jun 23, 2021, 3:47 PM IST

ಕೊಲ್ಲಂ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ 24 ವರ್ಷದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಅದರ ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಇದೀಗ ಮಹತ್ವದ ಪುರಾವೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಐಜಿ ಹರ್ಷಿತಾ ಅಟಲೂರಿ, ವಿಸ್ಮಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಪುರಾವೆಗಳು ಲಭ್ಯವಾಗಿವೆ. ಆದಷ್ಟು ಬೇಗ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದಿದ್ದಾರೆ. ನಿಲಾಮೆಲ್​​ನಲ್ಲಿರುವ ವಿಸ್ಮಯಾ ಅವರ ಮನೆಗೆ ಭೇಟಿ ನೀಡಿರುವ ಐಜಿ, ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು. ಇದರಲ್ಲಿ ಯಾವುದೇ ರೀತಿಯಲ್ಲೂ ರಾಜಿ ಆಗಲ್ಲ ಎಂದು ತಿಳಿಸಿದ್ದಾರೆ.

ವಿಸ್ಮಯಾ ಮನೆಗೆ ಆರೋಗ್ಯ ಸಚಿವೆ ಶೈಲಜಾ ಭೇಟಿ

ಇದನ್ನೂ ಓದಿರಿ: ಇದು ನನ್ನ ಕೊನೆ ಫೇಸ್​ಬುಕ್​​​ ಪೋಸ್ಟ್​​... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ

ಗಂಡನ ಮನೆಯಲ್ಲಿ ವಿಸ್ಮಯಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಇದೊಂದು ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಜತೆಗೆ ಗಂಡನ ಮನೆಯವರ ವಿರುದ್ಧ ದೂರು ದಾಖಲು ಮಾಡಿದ್ದರು. ಮೃತ ವಿಸ್ಮಯಾ ಮನೆಗೆ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಸಹ ಭೇಟಿ ನೀಡಿದ್ದು, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು, ಕೇರಳದಲ್ಲಿ ವರದಕ್ಷಿಣೆ ಭೂತ ಹೊಡೆದೋಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.

Last Updated : Jun 23, 2021, 3:47 PM IST

ABOUT THE AUTHOR

...view details