ಕೋಲ್ಕತ್ತಾ(ಪಶ್ಚಿಮ ಬಂಗಾಳ):ಖ್ಯಾತ ವಸ್ತ್ರ ವಿನ್ಯಾಸಕ ಅಭಿಷೇಕ್ ರಾಯ್ ತಮ್ಮ ಬಹುಕಾಲದ ಗೆಳೆಯ ಚೈತನ್ಯ ಶರ್ಮಾ ಅವರನ್ನ ವಿವಾಹವಾಗಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೊದಲ ಸಲಿಂಗ ವಿವಾಹಕ್ಕೆ ಸಾಕ್ಷಿಯಾಗಿದೆ. ಬೆಂಗಾಲಿ ವಿಧಿ ವಿಧಾನಗಳ ಮೂಲಕ ಕೋಲ್ಕತ್ತಾ ಹೋಟೆಲ್ನಲ್ಲಿ ವಿವಾಹ ಸಮಾರಂಭ ನಡೆಯಿತು.
ಜುಲೈ 3ರಂದು ನಡೆದ ಮದುವೆ ಸಮಾರಂಭದಲ್ಲಿ ಅಭಿಷೇಕ್ ಮತ್ತು ಚೈತನ್ಯ ಆಪ್ತರು ಭಾಗಿಯಾಗಿದ್ದರು. ಡಿಜಿಟಲ್ ಮಾರ್ಕೆಟರ್ ಆಗಿರುವ ಚೈತನ್ಯ ಗುರುಗ್ರಾಮ್ ನಿವಾಸಿಯಾಗಿದ್ದಾರೆ. ಇವರ ಮದುವೆ ಕಾರ್ಯಕ್ರಮದಲ್ಲಿ ಖ್ಯಾತ ಮೇಕಪ್ ಕಲಾವಿದ ಅನಿರುದ್ಧ ಚಕ್ಲದಾರ್ ಸಹ ಆಗಮಿಸಿದ್ದರು. ಇಬ್ಬರ ಮದುವೆ ಕಾರ್ಯಕ್ರಮದ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.