ಕರ್ನಾಟಕ

karnataka

ETV Bharat / bharat

ಎಚ್​ಐವಿ ಸೋಂಕಿತ ಘಾನಾ ಪ್ರಜೆಗೆ ಅಪರೂಪದ ಕಿಡ್ನಿ ಕಸಿ ಆಪರೇಷನ್​.. ಕೋಲ್ಕತ್ತಾ ಆಸ್ಪತ್ರೆಯ ಸಾಧನೆ

ಎಚ್​ಐವಿ ಸೋಂಕಿನಿಂದ ಬಳಲುತ್ತಿದ್ದ ಘಾನಾದ 51 ವರ್ಷದ ವ್ಯಕ್ತಿಗೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದು ಕಿಡ್ನಿ ಕಸಿ ಮೂಲಕ ದಾಖಲೆ ಮಾಡಿದೆ. ಇದು ದೇಶದಲ್ಲಿಯೇ ಅಪರೂಪದ ಚಿಕಿತ್ಸೆ ಎಂದು ಹೇಳಲಾಗ್ತಿದೆ.

rare-surgery
ಘಾನಾ ಪ್ರಜೆಗೆ ಅಪರೂಪದ ಕಿಡ್ನಿ ಕಸಿ ಆಪರೇಷನ್

By

Published : Nov 13, 2022, 8:19 PM IST

ಕೋಲ್ಕತ್ತಾ(ಪಶ್ಚಿಮಬಂಗಾಳ):ಶಸ್ತ್ರಚಿಕಿತ್ಸೆಗೆಂದು ಭಾರತೀಯರು ವಿದೇಶದ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ, ವಿದೇಶಿ ಪ್ರಜೆಯೊಬ್ಬನಿಗೆ ಪಶ್ಚಿಮಬಂಗಾಳದ ಆಸ್ಪತ್ರೆಯೊಂದು ವಿರಳ ರೂಪದ ಮೂತ್ರಪಿಂಡ ಆಪರೇಷನ್ ಮಾಡಿ ಮಹತ್ತರ ಸಾಧನೆಗೈದಿದೆ. ಇದು ದೇಶದಲ್ಲಿಯೇ ಮೊದಲು ಎಂದು ಹೇಳಲಾಗ್ತಿದೆ.

ಈ ಸಾಧನೆ ಮೂಡಿಬಂದಿದ್ದು ಕೋಲ್ಕತ್ತಾದ ಮುಕುಂದಾಪುರದ ಖಾಸಗಿ ಆಸ್ಪತ್ರೆ ವೈದ್ಯರಿಂದ. ಆಫ್ರಿಕಾ ಖಂಡದ ಘಾನಾದ 51 ವರ್ಷದ ಪ್ರಜೆಗೆ ಅಪರೂಪದ ಕಿಡ್ನಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ದಾನ ಮಾಡಿದ ವ್ಯಕ್ತಿ ಮತ್ತು ರೋಗಿಯ ರಕ್ತದ ಗುಂಪು ವಿಭಿನ್ನವಾಗಿದ್ದಲ್ಲದೇ, ರೋಗಿ ಎಚ್​ಐವಿ ಸೋಂಕಿನಿಂದ ಬಳಲುತ್ತಿದ್ದರು.

ಇಂತಹ ಸಂದಿಗ್ಧ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರ ತಂಡ, ಘಾನಾ ಪ್ರಜೆಗೆ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗೆ ಒಪ್ಪಿದೆ. 2 ತಿಂಗಳಿಂದ ರೋಗಿಯ ಮೇಲೆ ತೀವ್ರ ನಿಗಾ ವಹಿಸಿದ್ದ ವೈದ್ಯರು ಅಕ್ಟೋಬರ್​ 27 ರಂದು ಕಿಡ್ನಿ ಕಸಿ ಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.

ವಿಭಿನ್ನ ರಕ್ತ ಗುಂಪಿನ ವ್ಯಕ್ತಿಯಿಂದ ಕಿಡ್ನಿ ದಾನವಾಗಿ ಪಡೆದು ಎಚ್​ಐವಿ ಸೋಂಕಿತ ರೋಗಿಗೆ ಕಸಿ ಮಾಡಿರುವುದು ದೇಶದಲ್ಲಿಯೇ ಅಪರೂಪದ ಘಟನೆ ಎಂದು ಹೇಳಲಾಗ್ತಿದೆ. ಆಪರೇಷನ್​ ಬಳಿಕ ರೋಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಓದಿ:ಕರ್ನಾಟಕ, ರಾಜಸ್ಥಾನ, ಒಡಿಶಾದಲ್ಲಿ ಹನಿಟ್ರ್ಯಾಪ್​.. ಉದ್ಯಮಿಗಳನ್ನು ಬೆತ್ತಲಾಗಿಸಿದ ಮಹಿಳೆ ಅರೆಸ್ಟ್​

ABOUT THE AUTHOR

...view details