ಕೊಲ್ಹಾಪುರ: ವಿಶ್ವದ ಅತ್ಯಂತ ಪ್ರತಿಷ್ಠಿತ ಆಟ ಎಂದರೆ ಅದು ಇಂಗ್ಲೆಂಡ್‌ನ ವಿಂಬಲ್ಡನ್ ಸ್ಪರ್ಧೆಯಾಗಿದ್ದು, ಕೊಲ್ಲಾಪುರದ 14 ವರ್ಷದ ಐಶ್ವರ್ಯಾ ಜಾಧವ್ ಈ ಸ್ಪರ್ಧೆಯಲ್ಲಿ ಭಾರತದ ಧ್ವಜ ಹಾರಿಸಿದ ಮೊದಲ ಬಾಲಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗ್ರೀನ್ಸ್‌ನಲ್ಲಿ ಆಡಿದ ಈ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಸೋಲನುಭವಿಸಬೇಕಾಗಿ ಬಂದಿದ್ದರೂ, ಒಳ್ಳೆಯ ಅನುಭವದೊಂದಿಗೆ ಮುಂದಿನ ಪಯಣಕ್ಕೆ ಹೊರಟಿದ್ದಾಳೆ ಐಶ್ವರ್ಯಾ. ಲೋಕರಾಜ ರಾಜರ್ಷಿ ಛತ್ರಪತಿ ಶಾಹು ಮಹಾರಾಜರ ಬಲವಾದ ಪ್ರೋತ್ಸಾಹ ಮತ್ತು ಬೆಂಬಲದಿಂದಾಗಿ ಕೊಲ್ಲಾಪುರದ ಕ್ರೀಡಾ ಸಂಪ್ರದಾಯವು ಅಭಿವೃದ್ಧಿಗೊಂಡಿದ್ದು, ಇಲ್ಲಿನ ಅನೇಕ ಕ್ರೀಡಾಪಟುಗಳು ಕೊಲ್ಹಾಪುರದ ಹೆಸರನ್ನು ದೇಶ ಮತ್ತು ವಿದೇಶಗಳಲ್ಲಿ ಪ್ರಸಿದ್ಧಿ ಮಾಡಿದ್ದಾರೆ. ಈ ಆಟಗಾರ್ತಿಯರ ಹೆಸರಿಗೆ ಈಗ ಹೊಸ ಮಿಂಚು ತಾರೆ ಅಂದರೆ ಲಾನ್ ಟೆನಿಸ್ ಆಟಗಾರ್ತಿ ಐಶ್ವರ್ಯಾ ಜಾಧವ್ ಸೇರ್ಪಡೆಯಾಗಿದ್ದಾರೆ. ಈಕೆ ಇಂದು ಕೊಲ್ಹಾಪುರಕ್ಕೆ ವಾಪಸ್ ಆಗಿದ್ದಾಳೆ.
ಐಶ್ವರ್ಯ ಅವರು ಅಕ್ಟೋಬರ್ 4, 2008 ರಂದು ಪನ್ಹಾಳ ತಾಲೂಕಿನ ಯಾವಲುಜ್‌ನಲ್ಲಿ ವಾಸಿಸುವ ರೈತ ಕುಟುಂಬದಲ್ಲಿ ಜನಿಸಿದ್ದಾರೆ. ಐಶ್ವರ್ಯಾ ಜಾಧವ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಡಿಮೆ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಿದ್ದಾರೆ.
ತಂದೆ - ತಾಯಿಯ ಪ್ರೋತ್ಸಾಹದಿಂದಾಗಿ ಸೀನಿಯರ್ ಕೆ.ಜಿ.ಯಲ್ಲಿ ಲಾನ್ ಟೆನಿಸ್ ಆಡಲು ಆರಂಭಿಸಿದ್ದರು. ಜಾಧವ್ ಕುಟುಂಬವು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಐಶ್ವರ್ಯಾ ಟೆನಿಸ್ ವೃತ್ತಿಯನ್ನು ಮುಂದುವರಿಸಲು ಯವ್ಲುಜ್ ಗ್ರಾಮವನ್ನು ತೊರೆದು ನಗರದಲ್ಲಿ ವಾಸಿಸಲು ನಿರ್ಧರಿಸಿದೆ.