ಕರ್ನಾಟಕ

karnataka

ETV Bharat / bharat

ಫಲಿಸಿತು 22 ವರ್ಷಗಳ ಶ್ರಮದ ಫಲ: ಗೃಹಿಣಿ ಈಗ ಕೋಟ್ಯಧಿಪತಿ.. ಇದು ’ಕರೋಡ್​​ಪತಿ’ ಕಮಾಲ್​! - 1 ಕೋಟಿ ರೂ ಬಹುಮಾನ

ಕೇವಲ 12ನೇ ತರಗತಿಯ ಶಿಕ್ಷಣ ಪಡೆದಿದ್ದ ಚಾವ್ಲಾ ಹಲವು ವರ್ಷಗಳಿಂದ ಕೆಬಿಸಿ ಸೇರುವ ಗುರಿ ಹೊಂದಿದ್ದರು. ಅದಕ್ಕೆ ತಕ್ಕಂತೆ ಮನೆಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಂಡು ತಯಾರಿ ನಡೆಸಿದ್ದರು. ಕೊನೆಗೂ 22 ವರ್ಷಗಳಿಂದ ಮಾಡಿದ ಪ್ರಯತ್ನ ಈಗ ಫಲಿಸಿದೆ. ಈ ಬಗ್ಗೆ ಮಾತನಾಡಿರುವ ಕವಿತಾ ಕವಿತಾ ಚಾವ್ಲಾ "ಕೋಶಿಶ್ ಕರ್ನಾ ವಾಲೋನ್ ಕಿ ಕಭಿ ಹಾರ್ ನಹೀ ಹೋತಿ" ಎಂದು ಹೇಳಿದ್ದಾರೆ.

KOLHAPUR WOMAN KAVITA CHAWLA BECOMES FIRST CROREPATI IN KAUN BANEGA CROREPATI AFTER 22 YEARS EFFORTS
ಫಲಿಸಿತು 22 ವರ್ಷಗಳ ಶ್ರಮದ ಫಲ

By

Published : Sep 19, 2022, 10:51 PM IST

ಕೊಲ್ಹಾಪುರ: ಕೌನ್ ಬನೇಗಾ ಕರೋಡ್​​​​ಪತಿಗೆ ಹೋಗಿ ಅಲ್ಲಿ ಕೋಟ್ಯಧಿಪತಿಯಾಗುವ ಕನಸು ಅನೇಕರದ್ದು. ಕೊಲ್ಲಾಪುರದ ಗಾಂಧಿನಗರದ ಗೃಹಿಣಿಯೊಬ್ಬರು ಈ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಯಾಕೆಂದರೆ ಈ ವರ್ಷದ 14ನೇ ಸೀಸನ್​​​ನಲ್ಲಿ ಗಾಂಧಿನಗರದ ಕವಿತಾ ಚಾವ್ಲಾ ಕೋಟಿ ರೂ ಗೆಲ್ಲುವ ಮೂಲಕ ಕೋಟ್ಯಧಿಪತಿಯಾಗಿದ್ದಾರೆ.

22 ವರ್ಷದಿಂದ ಈ ಕನಸಿತ್ತು: ಕವಿತಾ ಚಾವ್ಲಾ, ಕಳೆದ 22 ವರ್ಷಗಳಿಂದ ಈ ಪ್ರಯತ್ನ ಮಾಡ್ತಿದ್ದರು. ಅಂದರೆ ಕೆಬಿಸಿ ಶೋ ಪ್ರಾರಂಭವಾದಾಗಿನಿಂದ ಅವರು ಕೋಟಿಗಳ ಕನಸು ಕಾಣಲು ಆರಂಭಿಸಿದ್ದರು. 2013ರಲ್ಲಿ ಟಾಪ್ 10ರಲ್ಲಿಯೂ ಆಯ್ಕೆಯಾಗಿದ್ದರು. ಆದರೆ, ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಕೆಬಿಸಿಗೆ ಹೋಗುವ ಅವಕಾಶ ಸಿಕ್ಕಿತ್ತು. ಅಷ್ಟೇ ಏಕೆ ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುವ ಅವಕಾಶವೂ ಲಭಿಸಿತು. ಹಾಟ್​ ಸೀಟ್​ನಲ್ಲಿ ಕುಳಿತುಕೊಂಡಿದ್ದಷ್ಟೇ ಅಲ್ಲ 1 ಕೋಟಿ ರೂ ಬಹುಮಾನವನ್ನೂ ಗೆದ್ದಿದ್ದಾರೆ.

ಕೇವಲ 12ನೇ ತರಗತಿಯ ಶಿಕ್ಷಣ ಪಡೆದಿದ್ದ ಚಾವ್ಲಾ ಹಲವು ವರ್ಷಗಳಿಂದ ಕೆಬಿಸಿ ಸೇರುವ ಗುರಿ ಹೊಂದಿದ್ದರು. ಅದಕ್ಕೆ ತಕ್ಕಂತೆ ಮನೆಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಂಡು ತಯಾರಿ ನಡೆಸಿದ್ದರು. ಕೊನೆಗೂ 22 ವರ್ಷಗಳಿಂದ ಮಾಡಿದ ಪ್ರಯತ್ನ ಈಗ ಫಲಿಸಿದೆ. ಈ ಬಗ್ಗೆ ಮಾತನಾಡಿರುವ ಕವಿತಾ ಕವಿತಾ ಚಾವ್ಲಾ "ಕೋಶಿಶ್ ಕರ್ನಾ ವಾಲೋನ್ ಕಿ ಕಭಿ ಹಾರ್ ನಹೀ ಹೋತಿ" ಎಂದು ಹೇಳಿದ್ದಾರೆ.

ಮಕ್ಕಳ ಶಿಕ್ಷಣಕ್ಕೇ ಈ ಹಣ ಬಳಕೆ: ಕವಿತಾ ಚಾವ್ಲಾ ಅವರ ಪುತ್ರ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಹೆಚ್ಚಿನ ಶಿಕ್ಷಣಕ್ಕಾಗಿ ಇಂಗ್ಲೆಂಡ್​ಗೆ ಹೋಗಲು ಬಯಸಿದ್ದರು. ಅದಕ್ಕಾಗಿ ಹಲವು ದಿನಗಳಿಂದ ಪ್ರಯತ್ನ ಆರಂಭಿಸಿದ್ದರು. ಈ ನಡುವೆ ಕವಿತಾ ಕೆಬಿಸಿಯಲ್ಲಿ 1 ಕೋಟಿ ಗೆದ್ದು ಮಿಲಿಯನೇರ್ ಆಗಿದ್ದಾರೆ. ಪತಿ ವಿಜಯ್ ಚಾವ್ಲಾ ಸಣ್ಣ ಬಟ್ಟೆ ಅಂಗಡಿ ವ್ಯಾಪಾರ ಮಾಡ್ತಿದ್ದಾರೆ. ಸ್ವಲ್ಪ ಸಾಲವೂ ಇದೆ. ಆದರೆ, ಈಗ ಪತ್ನಿ ಕೌನ್​​​ ಬನೇಗಾ ಕರೋಡ್​ಪತಿಯಲ್ಲಿ ಗೆಲುವು ಸಾಧಿಸಿರುವುದರಿಂದ ಸಂತಸವಾಗಿದೆ ಅಂತಿದ್ದಾರೆ ಪತಿ ವಿಜಯ್ ಚಾವ್ಲಾ.

ಫಲಿಸಿತು 22 ವರ್ಷಗಳ ಶ್ರಮದ ಫಲ: ಕೌನ್​ ಬನೇಗಾ ಕರೋಡಪತಿಯಲ್ಲಿ ಕೋಟ್ಯಧಿಪತಿ.. ಇದು ಕವಿತಾ ಸಾಧನೆ!

ಅದ್ದೂರಿ ಸ್ವಾಗತ: ಏತನ್ಮಧ್ಯೆ ಸೋಮವಾರ ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20 ರಂದು ಕೆಬಿಸಿಯಲ್ಲಿ ಈ ಸಂಚಿಕೆ ಪ್ರಸಾರವಾಗಲಿದೆ. ಆದರೆ, ಅವರು ಈ ಕಾರ್ಯಕ್ರಮದಿಂದ ಕೋಟ್ಯಧಿಪತಿಯಾಗಿ ಸ್ವ ಗ್ರಾಮಕ್ಕೆ ಮರಳಿದ್ದಾರೆ. ಸಾಧನೆ ಮಾಡಿ ಸ್ವಗ್ರಾಮಕ್ಕೆ ಮರಳಿರುವ ಕವಿತಾಗೆ ಗಾಂಧಿನಗರದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅವರ ಈ ಸಾಧನೆಗೆ ಸಂಬಂಧಿಕರು, ಕುಟುಂಬ ಮತ್ತು ನೆರೆಹೊರೆಯವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಫಲಿಸಿತು 22 ವರ್ಷಗಳ ಶ್ರಮದ ಫಲ: ಕೌನ್​ ಬನೇಗಾ ಕರೋಡಪತಿಯಲ್ಲಿ ಕೋಟ್ಯಧಿಪತಿ.. ಇದು ಕವಿತಾ ಸಾಧನೆ!

ಅಮಿತಾಭ್ ಬಚ್ಚನ್ ಎದುರು ಕುಳಿತಿದ್ದ ಮರೆಯಲಾರದ ಕ್ಷಣ: ಕಳೆದ 22 ವರ್ಷಗಳಿಂದ ಕಾಯುತ್ತಿದ್ದ ಆ ಕ್ಷಣ ನಿಜವಾಗಿಯೂ ಫಲಿಸಿತು. ಸೂಪರ್​ಸ್ಟಾರ್​ ಎದುರು ಕುಳಿತುಕೊಂಡಿದ್ದನ್ನು ನಂಬಲಾಗಲಿಲ್ಲ. 1 ಕೋಟಿ ಮೊತ್ತವನ್ನು ಗೆದ್ದಿರುವುದು ಸಂತೋಷದ ಸಂಗತಿಯಾದರೂ, ಅಮಿತಾಬ್ ಬಚ್ಚನ್ ಅವರ ಮುಂದೆ ಹಾಟ್ ಸೀಟ್ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದು ಜೀವನದಲ್ಲಿ ಮರೆಯಲಾರದ ಕ್ಷಣ ಎನ್ನುವುದು ಕವಿತಾ ಚಾವ್ಲಾ ಮನದಾಳದ ಮಾತು.

ಇದನ್ನು ಓದಿ:₹25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ ಸೇರುವುದು 15 ಕೋಟಿ ರೂಪಾಯಿ, 10 ಕೋಟಿ ಟ್ಯಾಕ್ಸ್!

For All Latest Updates

ABOUT THE AUTHOR

...view details