ಕೊಲ್ಹಾಪುರ,(ಮಹಾರಾಷ್ಟ್ರ) :ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ರೋಮಾಂಚನಕಾರಿ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಬದುಕಿದ ಬಡಜೀವಗಳು : ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗಿದ್ದವರು ಪ್ರಾಣಾಪಾಯದಿಂದ ಪಾರು - ಮಹಾರಾಷ್ಟ್ರದಲ್ಲಿ ಮಳೆಯ ಸುದ್ದಿ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು, ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ..
ಬದುಕಿದ ಬಡಜೀವಗಳು: ಮಳೆಯಿಂದ ರಕ್ಷಣೆಗಾಗಿ ಕಟ್ಟಡದ ಕೆಳಗಿದ್ದವರು ಪ್ರಾಣಾಪಾಯದಿಂದ ಪಾರು
ಕೊಲ್ಹಾಪುರ ನಗರದ ಮಹಾದ್ವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಳೆಯ ಕಾರಣದಿಂದ ಮೊದಲೇ ಶಿಥಿಲಗೊಂಡಿದ್ದ ಕಟ್ಟಡದ ಭಾಗವೊಂದು ಕುಸಿದಿದೆ. ಈ ವೇಳೆ ಕಟ್ಟಡದ ಕೆಳಗೆ ನಿಂತಿದ್ದ ವ್ಯಕ್ತಿಗಳಿಗೆ ಹೊರಗೆ ಬರುವಂತೆ ಬೇರೆಯವರು ಸೂಚಿಸಿದ ಕಾರಣದಿಂದ ಇಬ್ಬರು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಲ್ಲಿಯೇ ನಿಂತಿದ್ದ ವ್ಯಕ್ತಿಯೋರ್ವ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು, ಮಹಾರಾಷ್ಟ್ರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ.