ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಪೂರ್ಣಪ್ರಮಾಣದ ಕೇಂದ್ರ ಬಜೆಟ್ ಅನ್ನು ಬುಧವಾರ ಮಂಡಿಸಿದ್ದಾರೆ. ಬಂಡವಾಳ ವೆಚ್ಚದಲ್ಲಿ ಶೇ.33.4ರಷ್ಟು ಹೆಚ್ಚಳ ಹಾಗೂ ರೈಲ್ವೆ ಸೇರಿದಂತೆ ಕೆಲ ನಿರ್ಣಾಯಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:ಬಜೆಟ್‌ನ ಒಟ್ಟು ಗಾತ್ರ ಗೊತ್ತೇ?: ದೇಶದ ವಿತ್ತೀಯ ಕೊರತೆಯೇನು? ಯಾವುದಕ್ಕೆ ಎಷ್ಟು ಖರ್ಚು?
ಆದರೆ, ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಇಡೀ ರಾಷ್ಟ್ರದ ಮುಂದೆ ಹಲವಾರು ಆರ್ಥಿಕ ಅಂಶಗಳನ್ನು ಪಾರದರ್ಶಕವಾಗಿ ಮಂಡಿಸಿದರೂ, ಬಜೆಟ್‌ನ ಅಂಶಗಳ ಬಗ್ಗೆ ಅನೇಕರು ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ಅದರಲ್ಲೂ, ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ ಅನುದಾನವನ್ನು ಎಲ್ಲಿಂದ ಪಡೆಯುತ್ತದೆ ಮತ್ತು ಅದನ್ನು ಎಲ್ಲಿ, ಹೇಗೆ ಖರ್ಚು ಮಾಡುತ್ತದೆ ಎಂದು ಪ್ರಮುಖವಾಗಿ ಕಾಡುತ್ತಿರುತ್ತದೆ.
ರೂಪಾಯಿ ಎಲ್ಲಿಂದ ಬರುತ್ತದೆ?:ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ಶೇ.33.4ರಷ್ಟು ಹೆಚ್ಚಳ ಒಳಗೊಂಡಂತೆ ಸಾಲ ಮತ್ತು ಇತರ ಹೊಣೆಗಾರಿಕೆಗಳು ಸೇರಿ ಕೇಂದ್ರವು ಅತ್ಯಧಿಕ ಆದಾಯವನ್ನು ಹೊಂದಿದೆ ಎಂದು ಹೇಳಲಾಗಿದೆ. ನಂತರದಲ್ಲಿ ಜಿಎಸ್‌ಟಿ ಮತ್ತು ಇತರ ತೆರಿಗೆಗಳ ರೂಪದಲ್ಲಿ ಒಟ್ಟು ಆದಾಯದ ಶೇ.17ರಷ್ಟು ಹಾಗೂ ಆದಾಯ ತೆರಿಗೆ ಮತ್ತು ಕಾರ್ಪೊರೇಷನ್ ತೆರಿಗೆ ಶೇ.15ರಷ್ಟು ಆಗಿದೆ.
ಅಲ್ಲದೇ, ಅಬಕಾರಿ ಸುಂಕವು ಶೇ.7ರಷ್ಟು ಮತ್ತು ಬಾಡಿಗೆ, ದಂಡ ಹಾಗೂ ದಂಡದಂತಹ ತೆರಿಗೆಯೇತರ ಮೂಲಕ ಒಟ್ಟು ಆದಾಯದ ಶೇ.6ರಷ್ಟು, ಕಸ್ಟಮ್ಸ್ ಮತ್ತು ಸಾಲೇತರ ಬಂಡವಾಳ ಮೂಲಗಳ ಶೇ.4 ಮತ್ತು ಶೇ.2ರಷ್ಟು ಅನುದಾನ ಸಂಗ್ರಹಿಸಲಾಗುತ್ತದೆ. ಈ ವರ್ಷದ ಒಟ್ಟಾರೆ ಆದಾಯದಲ್ಲಿ ಜಿಎಸ್‌ಟಿ ಮತ್ತು ತೆರಿಗೆಯೇತರ ಸಂಗ್ರಹದಲ್ಲಿ ಶೇ.1ರಷ್ಟು ಅಂಶ ಏರಿಕೆಯಾಗಿದೆ. ಆದರೆ, ಸಾಲಗಳು ಮತ್ತು ಕಸ್ಟಮ್‌ಗಳಿಂದ ಶೇ.1ರಷ್ಟು ಕುಸಿತ ಕಂಡಿದೆ.
ರೂಪಾಯಿ ಎಲ್ಲಿಗೆ ಹೋಗುತ್ತದೆ?:ಆದಾಯ ವೆಚ್ಚದ ವಿಷಯಕ್ಕೆ ಬಂದಾಗ ಹೆಚ್ಚಿನ ಮೊತ್ತವು ಸಾಲಗಳ ಮೇಲಿನ ಬಡ್ಡಿಯನ್ನು ಪಾವತಿಸಲೆಂದೇ ಹೋಗುತ್ತದೆ. ಇದು ಒಟ್ಟು ವೆಚ್ಚದ ಶೇ.20ರಷ್ಟು ಆಗುತ್ತದೆ. ತೆರಿಗೆ ಮತ್ತು ಸುಂಕದ ರೂಪದಲ್ಲಿ ರಾಜ್ಯಗಳಿಗೆ ಒಟ್ಟು ಆದಾಯದ ಶೇ.18ರಷ್ಟು ನೀಡಲಾಗುತ್ತದೆ. ಕೇಂದ್ರ ಮತ್ತು ಕೇಂದ್ರದ ಪ್ರಾಯೋಜಿತ ಯೋಜನೆಗಳಿಹೆ ಕ್ರಮವಾಗಿ ಒಟ್ಟು ವೆಚ್ಚದ ಶೇ.17 ಮತ್ತು ಶೇ.9ರಷ್ಟು ಹಂಚಿಕೆಗಳು ಆಗುತ್ತದೆ. ಇವುಗಳೇ ಆದಾಯದಲ್ಲಿನ ದೊಡ್ಡ ವೆಚ್ಚಗಳಾಗಿವೆ.
ಅಲ್ಲದೇ, ಮುಂದಿನ ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳಿಗೆಂದು ಶೇ.9ರಷ್ಟು ಮತ್ತು ರಕ್ಷಣಾ ವಲಯಕ್ಕೆ ಒಟ್ಟು ವೆಚ್ಚದ ಶೇ.8ರಷ್ಟು ನೀಡಲಾಗುತ್ತದೆ. ವಿವಿಧ ಸಬ್ಸಿಡಿಗಳಿಗಾಗಿ ಶೇ.7ರಷ್ಟು ಹಾಗೂ ಪಿಂಚಣಿ ಯೋಜನೆಗಳಿಗೆ ಶೇ.4ರಷ್ಟು ವಚ್ಚ ಮಾಡಲಾಗುತ್ತದೆ. ಈ ವರ್ಷ ತೆರಿಗೆ ಮತ್ತು ಸುಂಕದಲ್ಲಿನ ರಾಜ್ಯಗಳ ಪಾಲಿನ ವೆಚ್ಚವು ಶೇ.1ರಷ್ಟು ಏರಿಕೆ ಕಂಡಿದೆ. ಸಬ್ಸಿಡಿಗಳ ವೆಚ್ಚದಲ್ಲಿ ಶೇ.1ರಷ್ಟು ಕಡಿಮೆಯಾಗಿದೆ ಎಂಬುವುದು ಗಮನಾರ್ಹ.
ಇದನ್ನೂ ಓದಿ:5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತ ಮುನ್ನುಗ್ಗುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್