ಕರ್ನಾಟಕ

karnataka

ETV Bharat / bharat

24 ಮಾಜಿ ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್​.. ಗುಜರಾತಿನ ರಾಜಕೀಯದಲ್ಲಿ ನಡೆಯುತ್ತಿರುವುದೇನು?​​​​​​​​​​

ಸದ್ಯ ಬಿಜೆಪಿಗೆ ಬಂದಿರುವ 24 ಮಾಜಿ ಕಾಂಗ್ರೆಸ್ ಸದಸ್ಯರು ಕಮಲದ ಟಿಕೆಟ್​ ಗಿಟ್ಟಿಸಿದ್ದು, ಗೆಲುವಿಗೆ ಹೋರಾಟ ನಡೆಸಿದ್ದಾರೆ. ವಿಶೇಷ ಎಂದರೆ ಕೇಸರಿ ಪಡೆಯ ನಿಷ್ಟಾವಂತ ಕಾರ್ಯಕರ್ತರು ಕೈನಲ್ಲಿದ್ದ ಇವರ ಗೆಲುವಿಗೆ ಶ್ರಮಿಸಬೇಕಿದೆ. ಮತ್ತೊಂದೆಡೆ ಈ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್​ ಸಹ ಸನ್ನದ್ಧವಾಗಿಸದೆ.

Know the winning strategy of giving tickets to 24 party defectors who were the originally Congress candidates
24 ಮಾಜಿ ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್​.. ಗುಜರಾತಿನ ರಾಜಕೀಯದಲ್ಲಿ ನಡೆಯುತ್ತಿರುವುದೇನು?​​​​​​​​​​

By

Published : Nov 16, 2022, 10:30 PM IST

ಅಹಮದಾಬಾದ್( ಗುಜರಾತ್​): ಭಾರತೀಯ ಜನತಾ ಪಕ್ಷವು 182 ಸ್ಥಾನದ ಗುಜರಾತ್​ ವಿಧಾನಸಭೆಗೆ ಇದುವರೆಗೂ 181 ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿದೆ. ಇವರಲ್ಲಿ 58 ಒಬಿಸಿ, 44 ಪಾಟಿದಾರ್, 15 ಕ್ಷತ್ರಿಯ ಹಾಗೂ 26 ಎಸ್‌ಟಿ ಮತ್ತು 13 ಬ್ರಾಹ್ಮಣರಿಗೆ ಟಿಕೆಟ್​ ಘೋಷಿಸಿದೆ.

ಕಾಂಗ್ರೆಸ್​ನಿಂದ ಬಂದ 24 ಜನರಿಗೆ ಟಿಕೆಟ್​:ವಿಶೇಷ ಎಂದರೆ ಮಾಲ್ಧಾರಿ ಸಮಾಜಕ್ಕೆ ಟಿಕೆಟ್ ನೀಡದಿರುವುದು ಅವರಿಗೆ ಬೇಸರ ತಂದಿದೆ. ಕಾಂಗ್ರೆಸ್​​​ನಿಂದ ಬಿಜೆಪಿಗೆ ಪಕ್ಷಾಂತರಗೊಂಡ 24 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಂದರೆ ಈ ಬಾರಿ 24 ಸ್ಥಾನಗಳಲ್ಲಿ ಕಾಂಗ್ರೆಸ್ ಹಿನ್ನೆಲೆಯುಳ್ಳ ಬಿಜೆಪಿ ಅಭ್ಯರ್ಥಿಗಳನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತಿದೆ.

2017 ಮತ್ತು 2022 ರ ನಡುವೆ 18 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಕಾಂಗ್ರೆಸ್​ನಿಂದ ಪಕ್ಷ ಸೇರ್ಪಡೆಗೊಂಡಿರುವ ಬ್ರಿಜೇಶ್ ಮೆರ್ಜಾ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇನ್ನು ಧವಲಸಿಂಗ್ ಝಾಲಾ ಮತ್ತು ಹಕುಭಾ ಜಡೇಜಾಗೆ ಕೂಡಾ ಟಿಕೆಟ್ ನೀಡಲಾಗಿಲ್ಲ. ಒಂದು ರೀತಿಯಲ್ಲಿ ಕಾಂಗ್ರೆಸ್ ನೆರವಿನೊಂದಿಗೆ ಬಿಜೆಪಿ ಗೆಲ್ಲಲು ಹೊರಟಂತಿದೆ.

ಸದ್ಯ ಬಿಜೆಪಿಗೆ ಬಂದಿರುವ 24 ಮಾಜಿ ಕಾಂಗ್ರೆಸ್ ಸದಸ್ಯರು ಕಮಲದ ಟಿಕೆಟ್​ ಗಿಟ್ಟಿಸಿದ್ದು, ಗೆಲುವಿಗೆ ಹೋರಾಟ ನಡೆಸಿದ್ದಾರೆ. ವಿಶೇಷ ಎಂದರೆ ಕೇಸರಿ ಪಡೆಯ ನಿಷ್ಟಾವಂತ ಕಾರ್ಯಕರ್ತರು ಕೈನಲ್ಲಿದ್ದ ಇವರ ಗೆಲುವಿಗೆ ಶ್ರಮಿಸಬೇಕಿದೆ. ಮತ್ತೊಂದೆಡೆ ಈ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್​ ಸಹ ಸನ್ನದ್ಧವಾಗಿದೆ.

ಆದಾಗ್ಯೂ, ಪಕ್ಷಾಂತರಗೊಂಡು ಬಿಜೆಪಿಗೆ ಸೇರ್ಪಡೆಗೊಂಡ ಮೂಲ ಕಾಂಗ್ರೆಸ್ ಅಭ್ಯರ್ಥಿಗಳಾದ ಮೊರ್ಬಿಯಿಂದ ಬ್ರಿಜೇಶ್ ಮೆರ್ಜಾ, ಜಾಮ್‌ನಗರದಿಂದ ಹಕುಭಾ ಜಡೇಜಾ, ಬೈದ್‌ನಿಂದ ಧವಲ್‌ಸಿಂಗ್ ಝಾಲಾ ಮತ್ತು ಧ್ರಂಗಾಧ್ರದಿಂದ ಪರಸೊತ್ತಮ್ ಸಬಾರಿಯಾ ಅವರಿಗೆ ಬಿಜೆಪಿ ಟಿಕೆಟ್​ ನಿರಾಕರಿಸಲಾಗಿದೆ.

ತಜ್ಞರು ಹೇಳುವುದೇನು?: 2022 ರ ವಿಧಾನಸಭಾ ಚುನಾವಣೆಗೆ ಎರಡು ವರ್ಷಗಳ ಹಿಂದೆಯೇ ತಯಾರಿ ನಡೆಸಲಾಯಿತು. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆದಿದ್ದು, ಕಾಂಗ್ರೆಸ್ ಅನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಎಲ್ಲ ಶಾಸಕರನ್ನು ಬಿಜೆಪಿ ಗೆಲ್ಲಿಸಿಕೊಂಡು ವಿಕ್ರಮ ಮೆರೆದಿದೆ. ಈ ಮೂಲಕ ಈ ಮೊದಲು ತಾನು ಗೆಲ್ಲದ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಲು ಮುಂದಾಗಿದೆ ಎಂದು ರಾಜಕೀಯ ತಜ್ಞ ಶಿರೀಶ್ ಕಾಶಿಕರ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಬಿಜೆಪಿ ಇನ್ನೂ ಪ್ರಬಲವಾದ ಎರಡನೇ ಹಂತದ ನಾಯಕರನ್ನು ಬೆಳೆಸುವಲ್ಲಿ ವಿಫಲವಾಗಿದೆ ಎಂದು ಕಾಶಿಕರ್ ಹೇಳಿದ್ದಾರೆ. ಮಹತ್ವದ ರಾಜಕೀಯ ಸಂಗತಿಯೆಂದರೆ ಇಂತಹ ಅಡ್ಡದಾರಿ ಹಿಡಿಯದೇ ಬಿಜೆಪಿ ತಾನು ಬಯಸಿದ ಸ್ಥಾನಗಳನ್ನು ಗಳಿಸಲು ಸಾಧ್ಯವಿಲ್ಲ. ಬಿಜೆಪಿಯ ಹಿರಿಯ ಸದಸ್ಯರು ಮತ್ತು ಟಿಕೆಟ್‌ ಆಕಾಂಕ್ಷಿ ನಾಯಕರು ಕೂಡ ಈ ಪ್ರತಿಕೂಲ ವಾಸ್ತವವನ್ನು ಮನಗಂಡಿದ್ದಾರೆ. ಕಾಂಗ್ರೆಸ್ ಹಿನ್ನೆಲೆಯ ಎಷ್ಟು ನಾಯಕರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನಿಜವಾಗಿ ಗೆಲ್ಲುತ್ತಾರೆ ಮತ್ತು ಬಿಜೆಪಿ ತತ್ವಕ್ಕೆ ನಿಜವಾಗಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆಯಷ್ಟೇ

ಇದನ್ನು ಓದಿ:ಸಾರ್ವಜನಿಕರಿಂದ 1 ರೂಪಾಯಿ ನಾಣ್ಯ ಸಂಗ್ರಹಿಸಿದ ಎಎಪಿ ಅಭ್ಯರ್ಥಿ: ಅದನ್ನೇ ಠೇವಣಿ ಇಟ್ಟು ನಾಮಪತ್ರ ಸಲ್ಲಿಕೆ

ABOUT THE AUTHOR

...view details