ಕರ್ನಾಟಕ

karnataka

ETV Bharat / bharat

ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಪನ್ನು ಸಾವಿನ ವದಂತಿ: ಭಯೋತ್ಪಾದನೆ ವಿರುದ್ಧ ಯಾವಾಗಲೂ ಕಠಿಣ ಕ್ರಮ ಎಂದ ಕೆನಡಾ ಪ್ರಧಾನಿ - ಖಲಿಸ್ತಾನಿ ಬೆಂಬಲಿಗರ ಸಾವಿನಿಂದ ತಲ್ಲಣ

ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಸಾವಿನ ವದಂತಿ ಹರಿಡಿದೆ. ಆದರೆ, ಖಲಿಸ್ತಾನಿ ಬೆಂಬಲಿಗರ ಸಾವಿನಿಂದ ತಲ್ಲಣಗೊಂಡ ಪನ್ನು ಭೂಗತರಾಗಿದ್ದಾನೆ ಎಂಬ ವರದಿಯಾಗಿದೆ. ಮತ್ತೊಂದೆಡೆ, ಖಲಿಸ್ತಾನಿಗಳ ವಿರುದ್ಧ ನಾವು ಯಾವಾಗಲೂ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

Etv Bharat
Etv Bharat

By

Published : Jul 6, 2023, 10:49 PM IST

ಚಂಡೀಗಢ: ನಿಷೇಧಿತ ಸಿಖ್ ಫಾರ್ ಜಸ್ಟಿಸ್ (Sikhs for Justice) ಸಂಘಟನೆಯ ಮುಖ್ಯಸ್ಥ ಮತ್ತು ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಅಮೆರಿಕದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ವೈರಲ್ ಆಗುತ್ತಿದೆ. ಈತನ ಸಾವಿನ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಪನ್ನು ಸಾವಿನ ಬಗ್ಗೆ ವದಂತಿ ಮಾತ್ರ ಜೋರಾಗಿದೆ. ಆದರೆ, ಮಾಧ್ಯಮ ವರದಿಗಳ ಪ್ರಕಾರ, ವಿದೇಶದಲ್ಲಿ ಅನೇಕ ಖಲಿಸ್ತಾನಿ ಬೆಂಬಲಿಗರ ಸಾವಿನಿಂದ ಪನ್ನು ಆತಂಕಕ್ಕೊಳಗಾಗಿದ್ದು, ಇದೀಗ ಭೂಗತರಾಗಿದ್ದಾನೆ.

ಕೆನಡಾದಲ್ಲಿ ಖಲಿಸ್ತಾನ್ ಬೆಂಬಲಿಗ ಹರ್ದೀಪ್ ಸಿಂಗ್ ನಿಜಾರ್ ಹತ್ಯೆಯ ನಂತರ ಅಮೆರಿಕವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡು ಖಲಿಸ್ತಾನ್ ಬೆಂಬಲಿಗರನ್ನು ಪ್ರಚೋದಿಸಲು ಪನ್ನು ಮುಂದಾಗಿದ್ದಾನೆ. ಇದರ ನಡುವೆ ಪಾಕಿಸ್ತಾನದಲ್ಲಿ ಪರಮ್‌ಜಿತ್ ಪಂಜ್ವಾಡ್ ಹತ್ಯೆ, ಲಂಡನ್‌ನಲ್ಲಿ ಅವತಾರ್ ಖಂಡದ ಸಾವು ಮತ್ತು ಕೆನಡಾದಲ್ಲಿ ಹರ್ದೀಪ್ ನಿಜಾರ್ ಕೊಲೆ.. ಹೀಗೆ ವಿದೇಶದಲ್ಲಿರುವ ಖಲಿಸ್ತಾನಿ ಬೆಂಬಲಿಗರನ್ನು ನಿರ್ನಾಮ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದ ಪನ್ನು ಹೆದರಿದ್ದಾನೆ.

ಇದನ್ನೂ ಓದಿ:ಖಲಿಸ್ತಾನ್ ಕಮಾಂಡೋ ಫೋರ್ಸ್​ನ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಹತ್ಯೆ..!

ಇದೇ ಭಯದಿಂದಲೂ ಕೂಡಲೇ ಪನ್ನು ಕೂಡ ಭೂಗತನಾಗಿದ್ದಾನೆ. ಇದೇ ವೇಳೆ, ಪನ್ನು ಸಾವಿನ ಬಗ್ಗೆ ವದಂತಿಗಳನ್ನು ಹರಡಲು ಯಾರೋ ಪ್ರಯತ್ನಿಸಬಾರದು ಎಂಬ ಅನುಮಾನ ಇದೆ. ಕೆಲವು ದಿನಗಳ ಹಿಂದೆ ಖಲಿಸ್ತಾನಿ ಬೆಂಬಲಿಗರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಭಯೋತ್ಪಾದಕ ಪನ್ನು ಸಾವಿನ ವಿಷಯವಾಗಿ ಮತ್ತೆ ಭಾರತದ ವಿರುದ್ಧ ವಿಷಕಾರಿ ಹೇಳಿಕೆಯನ್ನು ವ್ಯಕ್ತಪಡಿಸಿದರು.

ಈ ಮೊದಲು ಜೂನ್ 30ರಂದು ಪನ್ನು, ಜುಲೈ 8ರಿಂದ ಭಾರತೀಯ ರಾಯಭಾರ ಕಚೇರಿಯನ್ನು ಸುತ್ತುವರಿಯಲಾಗುವುದು ಎಂದು ಘೋಷಿಸಿದ್ದ. ಇಷ್ಟೆಲ್ಲ ಕ್ರಮದ ಬಳಿಕ ಅಮೆರಿಕ ಮತ್ತು ಕೆನಡಾ ಅಲರ್ಟ್‌ ಆಗಿತ್ತು. ಜೊತೆಗೆ ಎನ್‌ಐಎ ಕೂಡ ಅಖಾಡಕ್ಕೆ ಇಳಿದಿದೆ. ಫ್ರಾನ್ಸಿಸ್ಕೊ ಸೇರಿದಂತೆ ಕೆನಡಾ ಮತ್ತು ಬ್ರಿಟನ್‌ನಲ್ಲಿರುವ ಭಾರತೀಯ ಸಂಘಟನೆಗಳಿಗೆ ಖಲಿಸ್ತಾನ್ ಬೆಂಬಲಿಗರ ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಎನ್‌ಐಎ ತಂಡ ಅಮೆರಿಕಕ್ಕೆ ತೆರಳಲು ಸಾಧ್ಯತೆಯೂ ಇದೆ.

ಕೆಲ ತಿಂಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿ ಎದುರು ನಡೆದ ದಾಳಿಯ ಬಗ್ಗೆಯೂ ಎನ್‌ಐಎ ತನಿಖೆ ನಡೆಸುತ್ತಿದೆ. ಆ ದಾಳಿಯಲ್ಲಿ ಭಾಗಿಯಾದವರೇ ಜುಲೈ 2ರ ದಾಳಿಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಎನ್‌ಐಎ ತನಿಖೆಯ ನಂತರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ:Khalistan radicals: ಅಮೆರಿಕದ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು: ವಿಡಿಯೋ

ಕಠಿಣ ಕ್ರಮ - ಕೆನಡಾ ಪ್ರಧಾನಿ ಎಚ್ಚರಿಕೆ:ಭಯೋತ್ಪಾದನೆಯನ್ನು ಎದುರಿಸಲು ಕೆನಡಾ ಬದ್ಧವಾಗಿದೆ.ತ ಮ್ಮ ಸರ್ಕಾರವು ದೇಶದಲ್ಲಿ ಖಾಲಿಸ್ತಾನ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಮೃದುವಾಗಿರುತ್ತದೆ ಎಂಬ ಕಲ್ಪನೆ ತಪ್ಪು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಗುರುವಾರ ಹೇಳಿದ್ದಾರೆ.

ಕೆನಡಾದಲ್ಲಿ ಖಲಿಸ್ತಾನ್​ ಪರ ಚಟುವಟಿಕೆಗಳ ಬಗ್ಗೆ ಭಾರತವು ಇತ್ತೀಚೆಗೆ ಎತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ಬಂದಿದೆ. ಅಲ್ಲದೇ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಚಿತ್ರಿಸುವ ವಿವಾದಾತ್ಮಕ ಸ್ತಬಚಿತ್ರ ಪರೇಡ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, ಖಲಿಸ್ತಾನಿಗಳು ಮಾಡಿದ್ದು ತಪ್ಪು. ಕೆನಡಾ ಯಾವಾಗಲೂ ಹಿಂಸಾಚಾರ ಹಾಗೂ ಹಿಂಸಾಚಾರದ ಬೆದರಿಕೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ನಾವು ಅತ್ಯಂತ ವೈವಿಧ್ಯಮಯ ದೇಶವನ್ನು ಹೊಂದಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮಲ್ಲಿದೆ. ಆದರೆ ನಾವು ಯಾವಾಗಲೂ ಹಿಂಸಾಚಾರ ಮತ್ತು ಉಗ್ರವಾದವನ್ನು ಸಹಿಸಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details