ತಿರುವನಂತಪುರಂ:ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಕೇರಳದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ನಡುವೆ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಮತ್ತೊಂದು ಸಾಧನೆ ಮಾಡಿದ್ದಾರೆ. ಕಣ್ಣೂರು ಜಿಲ್ಲೆ ಮಾಟನ್ನೂರಿನಿಂದ ಸ್ಪರ್ಧಿಸಿದ್ದ ಇವರು, 140 ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು 60,963 ಮತಗಳನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಜಾಗತಿಕ ಮನ್ನಣೆ ಪಡೆದ ಟೀಚರ್ :
'ಶೈಲಜಾ ಟೀಚರ್' ಎಂದೇ ಕೇರಳ ಜನತೆಯಿಂದ ಹೆಸರು ಪಡೆದಿರುವ ಕೆ.ಕೆ ಶೈಲಜಾ, 2017-18 ರಲ್ಲಿ ವಕ್ಕರಿಸಿದ ನಿಫಾ ವೈರಸ್ ಮತ್ತು 2019ರ ಕೋವಿಡ್ ಸೇರಿದಂತೆ ಮಾರಣಾಂತಿಕ ಸಾಂಕ್ರಾಮಿಕ ರೋಗಗಳನ್ನು ತನ್ನ ರಾಜ್ಯದಲ್ಲಿ ಸಮರ್ಥವಾಗಿ ನಿರ್ವಹಿಸಿದ ಮಹಿಳೆ. ಇವರ ಕೆಲಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಆರೋಗ್ಯ ಕ್ಷೇತ್ರದ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಕೇರಳಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ ಸ್ಟಾರ್ ಕ್ಯಾಂಪೇನರ್ಗಳ ಪಟ್ಟಿಯಲ್ಲಿ ಶೈಲಜಾ ಟೀಚರ್ ಮುಂಚೂಣಿಯಲ್ಲಿದ್ದರು. ಈ ಎಲ್ಲದರ ಫಲಿತಾಂಶ ಎಂಬಂತಿದೆ ಇವರ ಅಭೂತಪೂರ್ವ ಗೆಲುವು.
ಶಿಕ್ಷಕಿ ಟು ಸಚಿವೆ ಒಂದು ಯಶಸ್ಸಿನ ಕಥೆ:2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಡುವ ಮುನ್ನ ಇವರೊಬ್ಬ ಶಾಲಾ ಶಿಕ್ಷಕಿಯಾಗಿದ್ದರು. ಸುಮಾರು 23 ವರ್ಷಗಳ ಕಾಲ ಮಕ್ಕಳಿಗೆ ಪಾಠ ಮಾಡಿದ್ದಾರೆ. ಸಿಪಿಐ (ಎಂ) ನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ಯ ಮಾಜಿ ಸದಸ್ಯೆಯೂ ಆಗಿದ್ದು, ಪಕ್ಷದ ಉನ್ನತ ಸ್ಥಾನಕ್ಕೇರಿ 2016 ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾದರು.
ಮೊದಲ ಪ್ರಯತ್ನದಲ್ಲೇ ಸಚಿವ ಸ್ಥಾನ: