ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ (ಐಐಐಟಿಎಚ್) ಸಂಶೋಧಕರು ವಿಶೇಷ ಗಾಳಿಪಟ ಕ್ಯಾಮೆರಾವನ್ನು ಅನಾವರಣಗೊಳಿಸಿದ್ದು, ಇದು ಕ್ಯಾಮೆರಾ ಡ್ರೋನ್‌ಗಳು ಮತ್ತು ಕೈಟ್ ಅಸಿಸ್ಟೆಡ್ ಫೋಟೋಗ್ರಫಿಗೆ (ಕೆಎಪಿ) ಕಡಿಮೆ ವೆಚ್ಚದಲ್ಲಿ ಪರ್ಯಾಯವಾಗಲಿದೆ ಎಂಬ ಭರವಸೆ ನೀಡಿದೆ.
ತಂತ್ರಜ್ಞಾನ ಸಂಶೋಧನೆಯ ಸಂಶೋಧಕರು ಹಗುರವಾದ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದು, ಚಿತ್ರಗಳನ್ನು ಸೆರೆಹಿಡಿಯಲು ಯಾವುದೇ ಸಾಮಾನ್ಯ ಗಾಳಿಪಟಕ್ಕೆ ಈ ಕ್ಯಾಮೆರಾವನ್ನು ಅಂಟಿಸಬಹುದು.
ಐಐಐಟಿಎಚ್ ಸಂಶೋಧಕರು ಅಭಿವೃದ್ಧಿಪಡಿಸಿದ 'ಗಾಳಿಪಟ ಕ್ಯಾಮೆರಾ' ಕೈಟ್ ಅಸಿಸ್ಟೆಡ್ ಫೋಟೋಗ್ರಫಿಯಲ್ಲಿ ಕ್ಯಾಮೆರಾವನ್ನು ಗಟ್ಟಿಮುಟ್ಟಾದ, ವಿಶೇಷವಾಗಿ ವಿನ್ಯಾಸಗೊಳಿಸಿದ ಗಾಳಿಪಟಕ್ಕೆ ರಿಗ್ ಮೂಲಕ ಜೋಡಿಸುವ ಅಗತ್ಯವಿದೆ.
ಆದರೆ, ಈ ವಿಶೇಷ ಕೈಟ್‌ಕ್ಯಾಮೆರಾ ಎಂಬ ವ್ಯವಸ್ಥೆಯಲ್ಲಿ ಗಾಳಿಪಟದ ಬೆನ್ನುಮೂಳೆಯೊಂದಿಗೆ ನಯವಾದ ಕ್ಯಾಮೆರಾ ಮಾಡ್ಯೂಲ್ ಜೋಡಿಸಲಾಗುತ್ತದೆ.
ಐಐಐಟಿಎಚ್ ಸಂಶೋಧಕರು ಅಭಿವೃದ್ಧಿಪಡಿಸಿದ 'ಗಾಳಿಪಟ ಕ್ಯಾಮೆರಾ' ಗಾಳಿಪಟವು ಹಾರಾಟಕ್ಕಾಗಿ ಗಾಳಿಯನ್ನು ಅವಲಂಬಿಸಿರುವುದರಿಂದ, ವಿದ್ಯಾರ್ಥಿ ಅಭಿನವ್ ನವನಿತ್ ನೇತೃತ್ವದ ಸಂಶೋಧನಾ ತಂಡವು ಡಾ. ಅಫ್ತಾಬ್ ಹುಸೇನ್ ಅವರ ಮಾರ್ಗದರ್ಶನದಲ್ಲಿ, ಮೊದಲು ಫ್ಲೈಟ್ ಡೈನಾಮಿಕ್ಸ್ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿತು.
ಬಳಿಕ ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿಯನ್ನು ಬಳಸಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಯಿತು. ಮೊದಲ ಪರೀಕ್ಷಾ ಹಾರಾಟದಲ್ಲಿಯೇ, ಕೈಟ್‌ಕ್ಯಾಮ್ 35 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ಸಮಯದಲ್ಲಿ ಒಟ್ಟು 4,356 ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ.