ಹರಿಯಾಣ: ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ಮುಂದುವರೆದಿದ್ದು, ದೆಹಲಿ- ಹರಿಯಾಣ ಗಡಿಭಾಗವಾದ ಟಿಕ್ರಿ ಗಡಿಯಲ್ಲಿ ಅನ್ನದಾತರು ತಂಗಲು ಶಾಶ್ವತ ಆಶ್ರಯ ಕೇಂದ್ರವನ್ನು ನಿರ್ಮಿಸಲಾಗಿದೆ.
ಕಿಸಾನ್ ಸೋಷಿಯಲ್ ಆರ್ಮಿ ರೈತ ಸಂಘಟನೆಯು ಈ ಆಶ್ರಯ ಕೇಂದ್ರವನ್ನು ನಿರ್ಮಿಸಿದೆ. ಇಲ್ಲಿ ಒಟ್ಟು 25 ಮನೆಗಳನ್ನು ನಿರ್ಮಿಸಲಾಗಿದ್ದು, ಈ ಮನೆಗಳು ರೈತರ ಇಚ್ಛೆಯಂತೆಯೇ ಗಟ್ಟಿಮುಟ್ಟಾಗಿವೆ. ಮುಂಬರುವ ದಿನಗಳಲ್ಲಿ ಇಂತಹ 1000-2000 ಮನೆಗಳನ್ನು ಕಟ್ಟಲಾಗುವುದು ಎಂದು ಕಿಸಾನ್ ಸೋಷಿಯಲ್ ಆರ್ಮಿ ಮುಖಂಡ ಅನಿಲ್ ಮಲಿಕ್ ಹೇಳಿದ್ದಾರೆ.