ಲಖನೌ:ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂಪಡೆಯಲಾಗುವುದು ಎಂದು ಘೋಷಿಸಿದರೂ, ರೈತರು ತಮ್ಮ ಪ್ರಮುಖ ಬೇಡಿಕೆಗಳನ್ನು ಪೂರೈಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಅದರ ಭಾಗವಾಗಿ ಉತ್ತರ ಪ್ರದೇಶದ ಲಖನೌದ ಇಕೋ ಗಾರ್ಡನ್ನಲ್ಲಿ ಮಂಗಳವಾರ ಕಿಸಾನ್ ಪಂಚಾಯತ್ ಸಭೆಯನ್ನು(kisan mahapanchayat) ಕರೆಯಲಾಗಿದೆ.
ಲಖನೌದಲ್ಲಿ ಕಿಸಾನ್ ಪಂಚಾಯತ್.. ರೈತ ಹೋರಾಟದ ಬಗ್ಗೆ ನಿರ್ಧಾರ: ರಾಕೇಶ್ ಟಿಕಾಯತ್ - eco garden kisan mahapanchayat
ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್(Kisan Morcha leader Rakesh tikait) ನೇತೃತ್ವದಲ್ಲಿ ಉತ್ತರಪ್ರದೇಶದ ಲಖನೌದಲ್ಲಿ ಕಿಸಾನ್ ಪಂಚಾಯತ್(kisan mahapanchayat) ಆಯೋಜಿಸಲಾಗಿದೆ. ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ರೈತರು, ರೈತ ನಾಯಕರು ಸಭೆಗೆ ಆಗಮಿಸುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.
![ಲಖನೌದಲ್ಲಿ ಕಿಸಾನ್ ಪಂಚಾಯತ್.. ರೈತ ಹೋರಾಟದ ಬಗ್ಗೆ ನಿರ್ಧಾರ: ರಾಕೇಶ್ ಟಿಕಾಯತ್](https://etvbharatimages.akamaized.net/etvbharat/prod-images/768-512-13701411-thumbnail-3x2-kisan.jpg)
ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಈ ಸಭೆ (Kisan Morcha leader Rakesh tikait)ಆಯೋಜಿಸಲಾಗಿದೆ. ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ರೈತರು, ರೈತ ನಾಯಕರು ಸಭೆಗೆ ಆಗಮಿಸುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಸರ್ಕಾರ ಸಂಸತ್ತಿನಲ್ಲಿ ವಾಪಸ್ ಪಡೆಯಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ(ಎಂಎಸ್ಪಿ)ಯ ಬಗ್ಗೆ ಕಾನೂನು ರೂಪಿಸಬೇಕು. ಹೋರಾಟದ ವೇಳೆ ಮೃತಪಟ್ಟ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಲಾಗಿದೆ ಎಂದು ರೈತ ಹೋರಾಟದ ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.