ನವದೆಹಲಿ :ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿಯೊಬ್ಬರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ರಾಜ್ಯಪಾಲರಾಗಿ ನೇಮಿಸಿದ್ದರು. ಈ ಕುರಿತು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿ ಪ್ರಶ್ನಿಸಿದ್ದವು. ಇದಕ್ಕೆ ಪ್ರಕಿಯಿಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ತಮ್ಮ ಟ್ವೀಟ್ ಮೂಲಕ ಯಾರ ಹೆಸರನ್ನು ತೆಗೆದುಕೊಳ್ಳದೇ ನೇರ ವಾಗ್ದಾಳಿ ನಡೆಸಿದ್ದಾರೆ . "ಇಡೀ ಪರಿಸರ ವ್ಯವಸ್ಥೆ" ಮತ್ತೊಮ್ಮೆ ಈ ವಿಷಯದ ಬಗ್ಗೆ "ಪೂರ್ಣ ಸ್ವಿಂಗ್" ನಲ್ಲಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ನೇಮಕದ ಮೇಲೆ ಇಡೀ ಪರಿಸರ ವ್ಯವಸ್ಥೆಯು ಮತ್ತೊಮ್ಮೆ ಪೂರ್ಣ ಸ್ವಿಂಗ್ ಆಗುತ್ತಿದೆ. ಅವರು ಭಾರತವನ್ನು ತಮ್ಮ ವೈಯಕ್ತಿಕ ಉಂಬಳಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಈಗ, ಭಾರತ ಸಂವಿಧಾನದ ನಿಬಂಧನೆಗಳ ಪ್ರಕಾರ ಭಾರತವು ಭಾರತದ ಜನರಿಂದ ಮಾರ್ಗದರ್ಶನ ಪಡೆಯುತ್ತಿದೆ ಎಂದು ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದಾರೆ.
2019 ರಲ್ಲಿ ಇಡೀ ದೇಶವೇ ಕಾದು ಕುಳಿತ್ತಿದ್ದ ಐತಿಹಾಸಿಕ ಅಯೋಧ್ಯೆ ತೀರ್ಪಿನ ಮತ್ತು ತ್ರಿವಳಿ ತಲಾಖ್ನಂತ ಪ್ರಮುಖ ಮತ್ತು ಯಾವುದೇ ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿ ನಿವೃತ್ತ ನ್ಯಾಯಾಧೀಶ ಎಸ್. ಅಬ್ದುಲ್ ನಜೀರ್ ಅವರು ಭಾಗವಾಗಿದ್ದರು. ಇವರ ದಕ್ಷ , ಪ್ರಾಮಾಣಿಕತೆಯನ್ನು ಪರಿಗಣಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಭಾನುವಾರ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ. ಎಸ್. ಅಬ್ದುಲ್ ನಜೀರ್ ಅವರು ಸುಪ್ರೀಂಕೋರ್ಟ್ನಲ್ಲಿ 2017 ರಿಂದ 2023 ರವರೆಗೆ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತೊಂದು ಹೆಮ್ಮೆಯ ವಿಷಯ ಏನೆಂದರೆ ನಜೀರ್ ಅವರು ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರು.