ಕರ್ನಾಟಕ

karnataka

ETV Bharat / bharat

ಕೊರೊನಾಗೆ ರಾಜಸ್ಥಾನದ ಮಾಜಿ ಸಚಿವೆ ಬಲಿ: ಮೋದಿ, ಗೆಹ್ಲೋಟ್​ ಸಂತಾಪ - ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ

ರಾಜಸ್ಥಾನದ ರಾಜ ಸಮಂದ್​ನ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಮಹಾಮಾರಿ ಕೋವಿಡ್​ಗೆ ಬಲಿಯಾಗಿದ್ದು, ಇವರ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

BJP MLA Kiran Maheshwari dies of COVID
ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ

By

Published : Nov 30, 2020, 10:21 AM IST

ಜೈಪುರ (ರಾಜಸ್ಥಾನ): ಕೋವಿಡ್​ ಸೋಂಕಿಗೆ ಒಳಗಾಗಿದ್ದ ರಾಜಸ್ಥಾನದ ಮಾಜಿ ಸಚಿವೆ, ರಾಜಸಮಂದ್​ನ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ವಿಧಿವಶರಾಗಿದ್ದಾರೆ.

ಅಕ್ಟೋಬರ್ 28 ರಂದು ಕಿರಣ್ ಮಹೇಶ್ವರಿ ಅವರ ಕೊರೊನಾ ವರದಿ ಪಾಸಿಟಿವ್​ ಬಂದಿದ್ದು, ಹರಿಯಾಣದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ನಿಧನರಾದರು. ಮಹೇಶ್ವರಿ ಅವರ ಸಾವಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

1961 ರ ಅಕ್ಟೋಬರ್ 29ರಂದು ಜನಿಸಿದ ಕಿರಣ್ ಮಹೇಶ್ವರಿ ಉನ್ನತ ಶಿಕ್ಷಣ ಸಚಿವೆಯಾಗಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷೆ ಮತ್ತು ಬಿಜೆಪಿಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details