ಕಿನ್ನೌರ್ (ಹಿಮಾಚಲ ಪ್ರದೇಶ): ಟ್ಯಾಂಬೊ ಮತ್ತು ಕಿನ್ನೌರ್ ನಡುವಿನ ಹೆದ್ದಾರಿ ಹಿಮಾವೃತವಾಗಿದ್ದು, ವಾಹನದೊಳಗೇ ಸಿಕ್ಕಿ ಹಾಕಿಕೊಂಡ ಮಹಾರಾಷ್ಟ್ರದ ಒಟ್ಟು 12 ಪ್ರವಾಸಿಗರನ್ನು ಹಿಮಾಚಲಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.
"ನಿನ್ನೆ, ನಾವು ಹಿಮಾಚಲ ಪ್ರದೇಶದ ಲಾಹುಲ್-ಸ್ಪಿಟಿ ಪ್ರದೇಶದ ಟಾಂಬೋದಿಂದ ಕಿನ್ನೌರ್‌ಗೆ ಹೊರಟೆವು. ಆದರೆ, ಭಾರೀ ಹಿಮಪಾತದಿಂದಾಗಿ, ನಮ್ಮ ವಾಹನವು ಟ್ಯಾಂಬೋ ಮತ್ತು ಕಿನ್ನೌರ್‌ನ ಗಡಿ ಪ್ರದೇಶಗಳ ನಡುವೆ ಸಿಲುಕಿಕೊಂಡಿತ್ತು.
ನಂತರ ನಾವು ಸ್ಥಳೀಯ ಪೋಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ತಂಡ ನಮ್ಮ ರಕ್ಷಣೆಗೆ ಬಂದಿದ್ದಲ್ಲದೇ ನಮಗೆ ಆಹಾರವನ್ನೂ ಒದಗಿಸಿದ್ದಾರೆ. ಅವರ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ" ಎಂದು ರಕ್ಷಿಸಲ್ಟಟ್ಟ ಮಯೂರೇಶ್ ಎಂಬ ಪ್ರವಾಸಿಗ ಪ್ರತಿಕ್ರಿಯೆ ನೀಡಿದ್ದಾರೆ.